ಕುಂಬಳೆ: ಎದೆಹಾಲು ಸೇವಿಸುತ್ತಿದ್ದ ಮಗುವಿಗೆ ಉಸಿರಾಟ ಸಮಸ್ಯೆ ಎದುರಾಗಿ ಮೃತಪಟ್ಟಿದೆ. ಕುಂಬಳೆ ಸನಿಹದ ಬಂಬ್ರಾಣದಲ್ಲಿ ಬಾಡಿಗೆ ಮನೆಯಲ್ಲಿ ವಾಇಸುತ್ತಿರುವ ಇಶ್ವರಮಂಗಲ ನಿವಾಸಿ ಅಸೀಸ್-ಖದೀಜಾ ದಂಪತಿಯ ಮೂರು ತಿಂಗಳ ಮಗು ಆಯಿಷಾ ಮೆಹ್ರಾ ಮೃತಪಟ್ಟ ಹಸುಗೂಸು. ಸೋಮವಾರ ರಾತ್ರಿ ಮನೆಯಲ್ಲಿ ಎದೆಹಾಲು ಸಏವಿಸುತ್ತಿದ್ದ ಮಗುವಿಗೆ ಅಸೌಖ್ಯಕಾಣಿಸಿಕೊಂಡಿದ್ದು, ತಕ್ಷಣ ಕುಂಬಳೆಯ ಜಿಲ್ಲಾ ಸಹಕಾರಿಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮಗುವಿನ ಅಸಹಜ ಸಾವಿನ ಬಗ್ಗೆ ಆಸ್ಪತ್ರೆ ಅಧಿಕಾರಿಗಳ ನಿರ್ದೇಶ ಮೇರೆಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲಿಸರು ತನಿಖೆ ಆರಂಭಿಸಿದ್ದಾರೆ.




