ಕಾಸರಗೋಡು: ಒಂದು ವಾರದಿಂದ ನಡೆಯುತ್ತಿದ್ದ ಇರಿಯಣ್ಣಿ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ವಿಎಚ್‍ಎಸ್‍ಇ ವಿಭಾಗದ ರಾಷ್ಟ್ರೀಓಯ ಸೇವಾ ಯೋಜನೆ(ಎನ್ನೆಸ್ಸೆಸ್) ಶಿಬಿರವು ಜಿಎಲ್‍ಪಿಎಸ್ Pಕಾಟಿಪಾರದಲ್ಲಿ ಸಮಾರೋಪಗೊಂಡಿತು.
ಮುಳಿಯಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ ಶಾಲೆಯ ಅಂಗಳದಲ್ಲಿ ಮಾವಿನ ಸಸಿಗಳನ್ನು ನೆಡುವ ಮೂಲಕ ಶಿಬಿರ ಸಮಾರೋಪ ನಡೆಸಿದರು. ಶಾಲಾ ರಕ್ಷಕ ಶಿಕಷಕ( ಪಿಟಿಎ)ಸಂಗದ ಅಧ್ಯಕ್ಷ ಅಶ್ರಫ್ ಮತ್ತು ದೇಲಂಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ಲಕುಞÂ, ವಿಎಚ್‍ಎಸ್‍ಇ ವಿಭಾಗದ ಪ್ರಾಂಶುಪಾಲ ಪಿ.ಸುಚೀಂದ್ರನಾಥ್, ಕಾರ್ಯಕ್ರಮ ಅಧಿಕಾರಿ ಕೆ.ಶ್ಯಾಮಲಾ, ಸಿ.ಗಂಗಾಧರನ್, ಕೆ.ಇ.ಅಶ್ರಫ್, ಬಿ.ಫಜಿಲುದ್ದೀನ್, ಟಿ.ಟಿ. ಬೇಬಿ ಸುಮತಿ ಉಪಸ್ಥಿತರಿದ್ದರು.





