HEALTH TIPS

ಎರಡು ನಾಟಕ ಕೃತಿಗಳು ಬಿಡುಗಡೆ

             ಮಂಗಳೂರು: ಬರಹಗಾರ್ತಿ ಅಕ್ಷತಾ ರಾಜ್ ಪೆರ್ಲ ಅವರ 'ಮಂದಾರ ಮಲಕ' ಮತ್ತು ಬರಹಗಾರ ಬಾಲಕೃಷ್ಣ ಕೊಡವೂರು ಅವರ 'ಮಾಯದಪ್ಪೆ ಮಾಯಕಂದಾಲ್' ತುಳು ನಾಟಕ ಕೃತಿಗಳು ಶುಕ್ರವಾರ ಇಲ್ಲಿ ಲೋಕಾರ್ಪಣೆಗೊಂಡವು.

              ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ರಂಗಕರ್ಮಿ ವಿಜಯಕಯಮಾರ್ ಕೊಡಿಯಾಲ್‌ಬೈಲ್ ಅವರು, 'ಗಂಭೀರ ನಾಟಕಗಳತ್ತ ಪ್ರೇಕ್ಷಕರು ಒಲವು ತೋರುತ್ತಿರುವ ಸಂದರ್ಭದಲ್ಲಿ ಇವೆರಡು ಕೃತಿಗಳು ಬಿಡುಗಡೆಯಾಗಿರುವುದು ಸಕಾಲಿಕವಾಗಿದೆ.

            ಕೃತಿಗಳ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಇವು ರಂಗಕ್ಕೆ ಇಳಿಯಲಿ' ಎಂದು ಆಶಿಸಿದರು.

'ಮಂದಾರ ಮಲಕ' ಕೃತಿ ಪರಿಚಯಿಸಿದ ಪ್ರೊ. ಮೀನಾಕ್ಷಿ ರಾಮಚಂದ್ರ ಅವರು, 'ತುಳುವಿನ ವಾಲ್ಮೀಕಿ ಎಂದೇ ಖ್ಯಾತರಾಗಿರುವ ಮಂದಾರ ಕೇಶವ ಭಟ್ ಅವರ 446 ಪುಟಗಳ 'ಮಂದಾರ ರಾಮಾಯಣ' ಕೃತಿಯನ್ನು ಅಕ್ಷತಾ ರಾಜ್ ಅವರು ನಾಟಕ ರೂಪಕ್ಕೆ ಇಳಿಸಿದ್ದಾರೆ. ಮೂಲ ರಾಮಾಯಣಕ್ಕೆ ಕುಂದುಬಾರದಂತೆ ನಾಟಕ ನಿರೂಪಣೆ ಮಾಡಲಾಗಿದೆ. ನಾಟಕದಲ್ಲಿ ಸ್ತ್ರೀ ಪಾತ್ರಗಳು ಹೆಚ್ಚು ಪ್ರಭಾವ ಬೀರಿವೆ. ಮಂಥರೆ, ಶೂರ್ಪನಖಿ, ಶಬರಿಯಂತಹ ಸ್ತ್ರೀ ಪಾತ್ರಗಳ ನಿರೂಪಣೆಯು ಓದುಗನಲ್ಲಿ ಹೊಸ ಹೊಳಹು ಮೂಡಿಸುತ್ತದೆ' ಎಂದರು.

               'ಮಾಯದಪ್ಪೆ ಮಾಯಕಂದಾಲ್' ಕೃತಿ ಪರಿಚಯಿಸಿದ ವಕೀಲ ಶಶಿರಾಜ್ ಕಾವೂರು ಅವರು, 'ಪಾಡ್ದನ ಶೈಲಿಯ ಜನಪದ ನಾಟಕ ಇದಾಗಿದ್ದು, ಪ್ರತಿ ದೃಶ್ಯವೂ ರೋಚಕವಾಗಿದೆ. ತುಳು ಭಾಷೆಯ ಅಪೂರ್ವ ಪದಗಳು ಗಮನಸೆಳೆಯುತ್ತವೆ. ತುಳು ಅಕಾಡೆಮಿಯು ತುಳು ನಾಟಕಗಳ ಪ್ರಕಟಣೆಗೆ ಒಲವು ತೋರಬೇಕು' ಎಂದರು.

                  ಪತ್ರಕರ್ತ ಮಂದಾರ ರಾಜೇಶ್‌ ಭಟ್ ಇದ್ದರು. ಅಕ್ಷತಾ ರಾಜ್‍ ಪೆರ್ಲ ಸ್ವಾಗತಿಸಿದರು. ಬಾಲಕೃಷ್ಣ ಕೊಡವೂರು ವಂದಿಸಿದರು. ವಿ.ಕೆ. ಕಡಬ ಕಾರ್ಯಕ್ರಮ ನಿರೂಪಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries