ಮಂಜೇಶ್ವರ: ಹೃದಯ ಸ್ತಂಭನ ಆದಾಗ ತತ್‍ಕ್ಷಣವೇ ಸ್ಪಂದಿಸಿ ಹೃದಯ ಪುನಶ್ಚೇತನಗೊಳಿಸಬೇಕು. ಇದಕ್ಕೆ ಸೂಕ್ತವಾದ ತರಬೇತಿ ಪ್ರತಿಯೊಬ್ಬರೂ ಪಡೆಯಬೇಕು. ಅವಘಡಗಳಾದಾಗ ಎಲ್ಲಡೆ ಎಲ್ಲಾ ಕಾಲದಲ್ಲಿ ವೈದ್ಯರು ಲಭಿಸುವುದು ಸಾಧ್ಯವಿಲ್ಲ. ಈ ಕಾರಣದಿಂದ ತುರ್ತು ಸಂಸಭರ್ಗಳಲ್ಲಿ ವೈದ್ಯರು ಬರುವವರೆಗೆ ಅಥವಾ ಆಸ್ಪತ್ರೆಗೆ ಸಾಗಿಸುವವರೆಗೆ ರೋಗಿಯ ಪ್ರಾಣ ಉಳಿಸುವಂತೆ ನೋಡಿಕೊಳ್ಳಬೇಕು. ಈ ಕಾರಣದಿಂದ ಪ್ರತಿಯೊಬ್ಬರಿಗೂ ಹೃದಯ ಪುನಶ್ಚೇತನ ತರಬೇತಿ ಅತೀ ಅಗತ್ಯ ಎಂದು ಎ.ಜೆ.ಆಸ್ಪತ್ರೆಯ ಖ್ಯಾತ ಸರ್ಜನ್ ಡಾ.ಕಿಶನ್ ರಾವ್ ಬಾಳಿಲ ಹೇಳಿದರು.
ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ದಂತ ಚಿಕಿತ್ಸಾಲಯದ ಶುಶ್ರೂಶಕಿಯರಿಗೆ ಮತ್ತು ವೈದ್ಯರಿಗೆ ಒಂದು ದಿನದ ಹೃದಯ ಪುನಶ್ಚೇತನ ಕಾರ್ಯಾಗಾರ ನಡೆಯಿತು.
ಡಾ.ಕಿಶನ್ ರಾವ್ ಬಾಳಿಲ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದರು. ದಂತ ಚಿಕಿತ್ಸಾಲಯದ ವೈದ್ಯರಾದ ಡಾ.ಮುರಲಿ ಮೋಹನ ಚೂಂತಾರು ಮತ್ತು ಡಾ.ರಾಜಶ್ರೀ ಕಾರ್ಯಾಗಾರಕ್ಕೆ ಸಹಕಾರ ನೀಡಿದರು. ಡಾ.ಅಂಜಲಿ, ಚೈತ್ರ, ರಮ್ಯ, ಸುಶ್ಮಿತಾ ಮತ್ತು ಜಯಶ್ರೀ ಕಾರ್ಯಾಗಾರದಲ್ಲಿ ತರಬೇತಿ ಪಡೆದರು.
ಡಾ.ಮುರಲಿ ಮೋಹನ ಚೂಂತಾರು ಸ್ವಾಗತಿಸಿ, ಡಾ.ಜಯಶ್ರೀ ವಂದಿಸಿದರು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ಈ ಕಾರ್ಯಾಗಾರ ನಡೆಯಿತು. ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ನಿರಂತರವಾಗಿ ಕಾರ್ಯಾಗಾರ ನಡೆಯುತ್ತಿದೆ ಮತ್ತು ರೋಗಿಗಳ ಸೇವೆಯಲ್ಲಿ ಮುಂಚೂಣಿಯಲ್ಲಿದೆ.




.jpg)
