ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮೀ ದೇವಸ್ಥಾನದಲ್ಲಿ ಮಂಡಲ ಪೂಜಾ ಮಹೋತ್ಸವದ ಪ್ರಯುಕ್ತ ಶ್ರೀದೇವರಿಗೆ ಶತರುದ್ರಾಭಿಷೇಕ ನಡೆಯಿತು. ಇದೇ ಸಂದರ್ಭದಲ್ಲಿ ಕುಂಬಳೆ ಅನಂತಪುರ ಶ್ರೀ ಅನಂತಪದ್ಮನಾಭ ಮಹಿಳಾ ಭಜನಾ ಮಂಡಳಿ ಇವರಿಂದ ಭಜನಾ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ಊರಪರವೂರ ನೂರಾರು ಭಗವದ್ಭಕ್ತರು ಪಾಲ್ಗೊಂಡಿದ್ದರು. ಶ್ರೀಕ್ಷೇತ್ರದ ಜೀರ್ಣೋದ್ಧಾರ ಕಾರ್ಯವು ನಿರಂತರವಾಗಿ ನಡೆಯುತ್ತಿದ್ದು, ಅನ್ನಪೂರ್ಣೇಶ್ವರೀ ಗುಡಿ, ಗರ್ಭಗುಡಿ, ನಮಸ್ಕಾರ ಮಂಟಪದ ಕೆಲಸವು ಪೂರ್ಣಗೊಂಡಿದೆ. ಮಾಡಿಗೆ ತಾಮ್ರ ಅಳವಡಿಸಲಾಗಿದ್ದು, ರಾಜಾಂಗಣದ ಮುಂಭಾಗಕ್ಕೆ ಶಾಶ್ವತ ಚಪ್ಪರದ ಕೆಲಸ ಪ್ರಗತಿಯಲ್ಲಿದೆ. 2024 ಮಾರ್ಚ್ ಏಪ್ರಿಲ್ ತಿಂಗಳುಗಳಲ್ಲಿ ಬ್ರಹ್ಮಕಲಶೋತ್ಸವವೂ ನಡೆಯಲಿದೆ.

.jpg)
