ಬದಿಯಡ್ಕ: ಕಾಸರಗೋಡು ಕೃಷಿಕರ ಮಾರುಕಟ್ಟೆ ಸಹಕಾರಿ ಸಂಘ ನೀರ್ಚಾಲು ಇದರ 2022-23 ಆರ್ಥಿಕ ವರ್ಷದ ವಾರ್ಷಿಕ ಮಹಾಸಭೆ ನೀರ್ಚಾಲು ಪ್ರಧಾನ ಕಚೇರಿಯಲ್ಲಿ ಜರಗಿತು. ಸಂಘದ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಅಧ್ಯಕ್ಷತೆಯನ್ನು ವಹಿಸಿದ್ದರು.
ನಿರ್ದೇಶಕರುಗಳಾದ ಶಶಿಕಲಾ, ವೆಂಕಟ್ರಮಣ ಭಟ್, ಬಾಲಗೋಪಾಲ, ರಾಮಕೃಷ್ಣ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಅಪ್ಪಣ್ಣ ವರದಿ, ಬಜೆಟ್ ಮಂಡಿಸಿದರು. ಸಹಕಾರ ಭಾರತಿಯ ಜಿಲ್ಲಾ ಕಾರ್ಯದರ್ಶಿ ಶಂಕರನಾರಾಯಣ ಕಿದೂರು, ಕ್ಯಾಂಪ್ಕೋ ಮಾಜಿ ಉಪಾಧ್ಯಕ್ಷ ವಾಶೆ ಶ್ರೀಕೃಷ್ಣ ಭಟ್, ನೀರ್ಚಾಲು ಮಿಲ್ಕ್ ಸೊಸೈಟಿ ಅಧ್ಯಕ್ಷ ಉದನೇಶ ವೀರ ಕಿಳಿಂಗಾರು, ಶಿವಕೃಷ್ಣ ಭಟ್ ಬಳಕ್ಕ ಉಪಸ್ಥಿತರಿದ್ದರು. ಉಪಾಧ್ಯಕ್ಷ ರಾಧಾಕೃಷ್ಣ ಕೆದಿಲಾಯ ಸ್ವಾಗತಿಸಿ, ನಿರ್ದೇಶಕ ಗಣಪತಿ ಪ್ರಸಾದ ಕುಳಮರ್ವ ವಂದಿಸಿದರು. ನಿರ್ದೇಶಕಿ ಸ್ಮಿತಾ ಸರಳಿ ಪ್ರಾರ್ಥನೆ ಹಾಡಿದರು.

.jpg)
