ಕಾಸರಗೋಡು: ಕಾಞಂಗಾಡ್ ಮಗರಸಭೆ ತನ್ನ 2023-24ನೇ ವಾರ್ಷಿಕ ಯೋಜನೆಯನ್ವಯ 250 ಕುಟುಂಬಗಳ ವಯೋವೃದ್ಧರಿಗಾಗಿ ಮಂಚಗಳನ್ನು ಉಚಿತವಾಗಿ ವಿತರಿಸಿತು. ನಗರಸಭೆಯ 43 ವಾರ್ಡ್‍ಗಳಲ್ಲಿನ ಅರ್ಹ ಕುಟುಂಬಗಳಿಗೆ ಮಂಚಗಳನ್ನು ವಿತರಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ನಗರಸಭೆ ವ್ಯಾಪ್ತಿಯಲ್ಲಿ 750 ಮಂಚಗಳನ್ನು ಉಚಿತವಾಗಿ ವಿತರಿಸಲಾಗಿದೆ.
ಅಲಾಮಿ ಪಲ್ಲಿ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು. ಕಲ್ಯಾಣÁ್ಥಯಿ ಸಮಿತಿ ಅಧ್ಯಕ್ಷ ಪಿ.ಅಹ್ಮದ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿಲ್‍ಟೆಕ್ ಅಬ್ದುಲ್ಲಾ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಲತಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಸರಸ್ವತಿ, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನೀಶನ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಪ್ರಭಾವತಿ, ಕೌನ್ಸಿಲರ್‍ಗಳಾದ ಅಬ್ದುಲ್‍ರಹಿಮಾನ್, ಕುಸುಮಾ ಹೆಗ್ಡೆ ಉಪಸ್ಥಿತರಿದ್ದರು. ನಗರಸಭಾ ಕಾರ್ಯದರ್ಶಿ ಎನ್.ಮನೋಜ್ ಸ್ವಾಗತಿಸಿದರು. ಕುಟುಂಬಶ್ರೀ ಸದಸ್ಯ ಕಾರ್ಯದರ್ಶಿ ಎನ್.ವಿ.ದಿವಾಕರನ್ ವಂದಿಸಿದರು.





