ಎಣ್ಮಕಜೆ ಪಂಚಾಯಿತಿಯ ಪಡ್ರೆ ವಾಣೀನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲ್ ವಿಭಾಗದಲ್ಲಿ ಪ್ರಸಕ್ತ ತೆರವಾಗಿರುವ ಎಚ್.ಎಸ್.ಟಿ. ಇಂಗ್ಲೀಷ್ ಶಿಕ್ಷಕ ಹುದ್ದೆಗೆ ದಿನ ವೇತನ ಆಧಾರದಲ್ಲಿ ಶಿಕ್ಷಕರ ನೇಮಕಾತಿ ನಡೆಯಲಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಅಸಲಿ ಪ್ರಮಾಣ ಪತ್ರದೊಂದಿಗೆ ಜ.8ರಂದು ಬೆಳಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸುವಂತೆ ಮುಖ್ಯ ಶಿಕ್ಷಕರ ಪ್ರಕಟಣೆ ತಿಳಿಸಿದೆ.




