ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿ ವತಿಯಿಂದ'ಕನ್ನಡ ಭವನ ಕಾಸರಗೋಡಿನ ಅಭಿನಂದನಾ ಸಮಾರಂಭ-2024' ಹಾಗೂ ನುಡಿನಮನ ಕಾರ್ಯಕ್ರಮ ಕನ್ನಡ ಭವನ ಸಭಾಂಗಣದಲ್ಲಿ ಜರುಗಿತು.
ಹಿರಿಯ ಪತ್ರಕರ್ತ ಅಚ್ಯುತ ಚೇವಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಜಾನಪದ ವಿದ್ವಾಂಸ, ಸಾಹಿತಿ ಪ್ರೊ. ಅಮೃತ ಸೋಮೇಶ್ವರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಅವರಿಗೆ ನುಡಿನಮನದೊಂದಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಪ್ರೊ. ಎ.ಶ್ರೀನಾಥ್ ಅವರು ಅಮೃತ ಸೋಮೇಶ್ವರ ಅವರ ಬಗ್ಗೆ ಹಾಗೂ ವಿಜಿ ಕಾಸರಗೋಡು ಅವರು ಎಸ್.ವಿ ಭಟ್ ಅವರ ಬಗ್ಗೆ ಮಾತನಾಡಿದರು.
ಅಂತಾರಾಷ್ಟ್ರೀಯ ಮಾಧ್ಯಮ ಪುರಸ್ಕಾರ ಪಡೆದುಕೊಳ್ಳಲು ದುಬೈ ತೆರಳುತ್ತಿರುವ ಪತ್ರಕರ್ತ, ಲೇಖಕ, ಸಾಹಿತಿ, ನಿರೂಪಕ ರವಿ ನಾಯ್ಕಾಪು, ಐಸಿಎಆರ್-ಸಿಪಿಸಿಆರ್‍ಐನ ಬೆಸ್ಟ್ ಟೆಕ್ನಿಕಲ್ ಅವಾರ್ಡ್ ಪಡೆದಿರುವ ಪಾಂಡುರಂಗ ಕಾಸರಗೋಡು ಹಾಗೂ ಕೇರಳ ರಾಜ್ಯ ಭಾರತ್ ಸ್ಕೌಟ್-ಏಂಡ್ ಗೈಡ್ಸ್ ಮೆಡಲ್ ಆಫ್ ಮೆರಿಟ್ ಅವಾರ್ಡ್ ವಿಜೇತ ಕಿರಣ್ ಪ್ರಸಾದ್ ಕೂಡ್ಲು, ವಿಶೇಷ ಆಹ್ವಾನದ ಮೇರೆಗೆ ದುಬೈ ತೆರಳಲಿರುವ ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಗಂಗಾಧರ ಯಾದವ್ ತೆಕ್ಕೆಮೂಲೆ ಹಾಗೂ ಸಂಘದ ಕೋಶಾಧಿಕಾರಿ ಪುರುಷೋತ್ತಮ ಪೆರ್ಲ ಅವರಿಗೆ ಕನ್ನಡ ಭವನ ಕಾಸರಗೋಡಿನ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭ ಕನ್ನಡ ಸಾಹಿತ್ಯಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಅವರನ್ನು ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿ ವತಿಯಿಂದ ಗೌರವಿಸಲಾಯಿತು.
ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ, ವಕೀಲ ಥಾಮಸ್ ಡಿ.ಸೋಜ ಅಭಿನಂದನಾ ಭಾಷಣ ಮಾಡಿದರು. ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ, ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ, ಕನ್ನಡಭವನದ ಸಂಧ್ಯಾರಾಣಿ ಟೀಚರ್, ಕೆಸಿಎನ್ ಸುದ್ದಿವಾಹಿನಿಯ ಪುರುಷೋತ್ತಮ ನಾಯ್ಕ್ ಉಪಸ್ಥಿತರಿದ್ದರು. ಕನ್ನಡ ಭವನ ಸಂಚಾಲಕ ವಾಮನ್‍ರಾವ್ ಬೇಕಲ್ ಸ್ವಾಗತಿಸಿದರು. ವಿಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಪ್ರದಿಪ್ ಬೆಕಲ್ ವಂದಿಸಿದರು.





