HEALTH TIPS

ದೇವಾಲಯದ ಅವಶೇಷಗಳ ಮೇಲೆ ಜ್ಞಾನವಾಪಿ ಮಸೀದಿ ನಿರ್ಮಾಣ: ಎಎಸ್ಐ ಸಮೀಕ್ಷೆ ವರದಿ ಬಹಿರಂಗ

              ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಸಮೀಕ್ಷಾ ವರದಿಯನ್ನು ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ) ಬಹಿರಂಗಪಡಿಸಿದ್ದು, ಮೊದಲೇ ಅಸ್ತಿತ್ವದಲ್ಲಿರುವ ದೇವಾಲಯದ ಅವಶೇಷಗಳ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಗುರುವಾರ ಹೇಳಿದ್ದಾರೆ.

              839 ಪುಟಗಳ ಸಮೀಕ್ಷಾ ವರದಿಯ ಪ್ರತಿಗಳನ್ನು ಗುರುವಾರ ತಡರಾತ್ರಿ ನ್ಯಾಯಾಲಯವು ಸಂಬಂಧಪಟ್ಟ ಕಕ್ಷಿದಾರರಿಗೆ ನೀಡಿದೆ ಎಂದು ಜೈನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

             ಹಿಂದೆ ಇದ್ದ ದೇವಸ್ಥಾನವನ್ನು ಕೆಡವಿದ ಅವಶೇಷಗಳ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಸಮೀಕ್ಷೆಯ ವರದಿ ಸ್ಪಷ್ಟಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

              "ಅಸ್ತಿತ್ವದಲ್ಲಿರುವ ರಚನೆಯನ್ನು ನಿರ್ಮಿಸುವ ಮೊದಲು ಒಂದು ದೊಡ್ಡ ಹಿಂದೂ ದೇವಾಲಯ ಅಸ್ತಿತ್ವದಲ್ಲಿತ್ತು ಎಂದು ಎಎಸ್ಐ ಹೇಳಿದ್ದು, ಎಎಸ್ಐನ ನಿರ್ಣಾಯಕ ಸಂಶೋಧನೆಯಾಗಿದೆ" ಎಂದು ಅವರು ತಿಳಿಸಿದ್ದಾರೆ.

              ಸರ್ವೇ ವರದಿಯಲ್ಲಿ ಮಸೀದಿಗೂ ಮುನ್ನ ದೊಡ್ಡ ದೇಗುಲ ಇತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ವಕೀಲರು ಹೇಳಿದ್ದಾರೆ.

                 ಸಮೀಕ್ಷೆಯಲ್ಲಿ 32 ಸ್ಥಳಗಳಲ್ಲಿ ಪುರಾವೆಗಳು ಸಿಕ್ಕಿವೆ. ಮಸೀದಿ ಹಿಂದೆ ಹಿಂದೂ ದೇವಾಲಯವಿತ್ತು ಎಂದು ತೋರಿಸುತ್ತದೆ. 2 ಸೆಪ್ಟೆಂಬರ್ 1669 ರಂದು ದೇವಾಲಯವನ್ನು ಕೆಡವಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಜನಾರ್ದನ, ರುದ್ರ ಮತ್ತು ವಿಶ್ವೇಶ್ವರನ ಬಗ್ಗೆ ಶಾಸನಗಳು ಕಂಡುಬಂದಿವೆ. ಜ್ಞಾನವಾಪಿಯ ಪಶ್ಚಿಮ ಗೋಡೆಯು ಹಿಂದೂ ದೇವಾಲಯದ ಭಾಗವಾಗಿತ್ತು. ಅದನ್ನು ಸುಲಭವಾಗಿ ಗುರುತಿಸಬಹುದಾಗಿದೆ ಎಂದು ಹಿಂದೂ ಪರ ವಕೀಲರು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries