HEALTH TIPS

ಸ್ಪೇಸ್‌ ಎಕ್ಸ್‌ನ ರಾಕೆಟ್‌ ಬಳಸಿ ಉಪಗ್ರಹ ಉಡ್ಡಯನಕ್ಕೆ ಇಸ್ರೊ ಸಜ್ಜು

               ವದೆಹಲಿ: ಇಸ್ರೊದ ವಾಣಿಜ್ಯ ಅಂಗಸಂಸ್ಥೆ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ (ಎನ್‌ಎಸ್‌ಐಎಲ್‌), ಸ್ಪೇಸ್‌ ಎಕ್ಸ್‌ನ 'ಫಾಲ್ಕನ್-9' ರಾಕೆಟ್‌ನ ನೆರವಿನಿಂದ ಸಂವಹನ ಉದ್ದೇಶದ ಉಪಗ್ರಹವನ್ನು ಉಡ್ಡಯನ ಮಾಡಲಿದೆ.

               ದೇಶದ ಬ್ರಾಡ್‌ಬ್ಯಾಂಡ್ , ವಿಮಾನ ಮತ್ತು ನೌಕೆಗಳಲ್ಲಿ ಸಂವಹನ (ಐಎಫ್‌ಎಂಸಿ) ಹಾಗೂ ಸೆಲ್ಯುಲರ್ ಸೇವೆಗಳನ್ನು ಒದಗಿಸುವ 'ಜಿಎಸ್‌ಎಟಿ-20' ಉಪಗ್ರಹವನ್ನು ವರ್ಷದ ಮಧ್ಯಭಾಗದಲ್ಲಿ ಉಡ್ಡಯನ ಮಾಡಲಾಗುತ್ತದೆ.

              ಇದಕ್ಕಾಗಿ ಅಮೆರಿಕದ ಸ್ಪೇಸ್‌ಎಕ್ಸ್‌ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎನ್‌ಎಸ್‌ಐಎಲ್‌ ಬುಧವಾರ ಪ್ರಕಟಿಸಿದೆ.

              4.7 ಟನ್‌ ಭಾರದ ಈ 'ಜಿಎಸ್‌ಎಟಿ-20' ಉಪಗ್ರಹವು ಅಧಿಕ ಸಂವಹನ ಸಾಮರ್ಥ್ಯವನ್ನು ಹೊಂದಿರಲಿದ್ದು, ಇದರಿಂದ ದೇಶದಾದ್ಯಂತವಲ್ಲದೇ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು, ಲಕ್ಷದ್ವೀಪಕ್ಕೂ ಸೇವೆ ವಿಸ್ತರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದೆ.

               ಇಸ್ರೊ ಬಳಿ ಇರುವ 'ಜಿಎಸ್‌ಎಲ್‌ವಿ-ಎಂಕೆ3' ರಾಕೆಟ್‌ನಿಂದ 4 ಟನ್‌ ಭಾರದ ಉಪಗ್ರಹಗಳನ್ನು ಭೂ ಕಕ್ಷೆಗೆ ಸೇರಿಸಬಹುದಾಗಿದೆ. ಹೀಗಾಗಿ 'ಜಿಎಸ್‌ಎಟಿ-20' ಉಪಗ್ರಹ ಉಡ್ಡಯನಕ್ಕೆ ಸ್ಪೇಸ್‌ ಎಕ್ಸ್‌ನ ಅಧಿಕ ಸಾಮರ್ಥ್ಯದ 'ಫಾಲ್ಕನ್‌-9' ರಾಕೆಟ್‌ ಬಳಸಲಾಗುತ್ತದೆ.

'ಫಾಲ್ಕನ್‌-9' ರಾಕೆಟ್‌, 8.3 ಟನ್‌ನಷ್ಟು ಭಾರದ ಸಾಧನಗಳನ್ನು ಹೊತ್ತೊಯ್ದು, ಭೂಕಕ್ಷೆಗೆ ಸೇರಿಸುವ ಸಾಮರ್ಥ್ಯ ಹೊಂದಿದೆ.

             10 ಟನ್‌ ಭಾರದ ಸಾಧನಗಳನ್ನು ಸಹ ಉಡ್ಡಯನ ಮಾಡುವ ಸಾಮರ್ಥ್ಯವಿರುವ 'ನೆಕ್ಟ್ಸ್‌ ಜನರೇಷನ್ ಲಾಂಚ್‌ ವೆಹಿಕಲ್‌' (ಎನ್‌ಜಿಎಲ್‌ವಿ) ರಾಕೆಟ್‌ ಅನ್ನು ಇಸ್ರೊ ಅಭಿವೃದ್ಧಿಪಡಿಸುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries