ತ್ರಿಶೂರ್: ತ್ರಿಶೂರ್ ನ ತೇಕಿಂಕಾಡ್ ಮೈದಾನದಲ್ಲಿ ಪ್ರಧಾನಿ ಭಾಷಣ ಮಾಡಿದ ವೇದಿಕೆ ಬಳಿ ಸಂಘರ್ಷಕ್ಕೆ ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ತಡೆದಿದೆ.
ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ ವೇದಿಕೆ ಬಳಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬಂದು ವಾಗ್ವಾದ ನಡೆಸಿದು, ಅದು ಘರ್ಷಣೆಗೆ ತಿರುಗಿತು.
ನಂತರ ಪೆÇಲೀಸರು ಸ್ಥಳಕ್ಕಾಗಮಿಸಿ ಎರಡೂ ಕಡೆಯವರನ್ನು ಘರ್ಷಣೆಯಿಂದ ದೂರವಿಟ್ಟರು. ಪ್ರತಿಭಟನೆಗೆ ಯುವ ಕಾಂಗ್ರೆಸ್ಸಿಗರನ್ನು ಪ್ರಧಾನಿ ವೇದಿಕೆಗೆ ಕಳುಹಿಸಿದ ಟಿ.ಎನ್. ಪ್ರತಾಪನ್ ಉತ್ತರಿಸಬೇಕಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಕೆ. ಅನೀಶ್ ಕುಮಾರ್ ಹೇಳಿರುವರು. ಇಂತಹ ಪ್ರತಿಭಟನೆಯ ನಾಟಕವಾಡಿದ ಪ್ರತಾಪನಿಗೆ ಸಗಣಿ ನೀರಿನಲ್ಲಿ ಸ್ನಾನ ಮಾಡಿಸುವುದು ಬಿಜೆಪಿಗೆ ಗೊತ್ತಿದೆ ಕಿಡಿಕಾರಿವರು.
ಪ್ರತಾಪ ಕಿರಿಕಿರಿಯನ್ನು ಉಂಟುಮಾಡದಂತೆ ಮತ್ತು ಅಪಾಯವನ್ನು ಆಹ್ವಾನಿಸದಂತೆ ಎಚ್ಚರಿಕೆ ವಹಿಸಬೇಕು. ಪ್ರಧಾನಿ ಕಾರ್ಯಕ್ರಮದ ವೇಳೆ ಯುವ ಕಾಂಗ್ರೆಸಿಗರು ಅತಿಕ್ರಮ ಪ್ರವೇಶ ಮಾಡಿದ್ದು, ಪ್ರತಿಭಟನೆಗೆ ಪೆÇಲೀಸರು ಮಣಿದಿದ್ದಾರೆ. ಅವರನ್ನು ತಡೆಯುವ ಪ್ರಯತ್ನ ಮಾಡಿಲ್ಲ ಎಂದು ಬಿಜೆಪಿ ಆರೋಪಿಸಿದೆ.





