ಕೊಲ್ಲಂ: ರಾಜ್ಯಮಟ್ಟದ ಕಲೋತ್ಸವಕ್ಕೆ ಆಗಮಿಸುವ ಸ್ಪರ್ಧಿಗಳ ಪ್ರಯಾಣಕ್ಕೆ ವಿಸ್ತೃತ ವ್ಯವಸ್ಥೆ ಕಲ್ಪಿಸಲಗಿದೆ. 30 ಬಸ್‍ಗಳು ಉಚಿತ ಸೇವೆ ನೀಡಲಿವೆ. ಸ್ಪರ್ಧಿಗಳನ್ನು ವಿವಿಧ ಸ್ಥಳಗಳಿಗೆ ಸಾಗಿಸಲು ಉಚಿತ ಆಟೋ ಸೇವೆಯೂ ಇದೆ.
ಕಣ್ಣೂರು ಮತ್ತು ತ್ರಿಶೂರ್ ಜಿಲ್ಲೆಗಳಿಂದ ಬಂದವರನ್ನು ಕೊಲ್ಲಂ ರೈಲು ನಿಲ್ದಾಣದಲ್ಲಿ ಶಾಸಕ ಮತ್ತು ಕಲೆಕ್ಟರ್ ಸ್ವಾಗತಿಸಿದರು. ರೈಲ್ವೇ ನಿಲ್ದಾಣದಲ್ಲಿ ಸ್ವಾಗತ ನೀಡಿರುವ ಬಗ್ಗೆ ಸ್ಪ್‍ರ್ಧಿಗಳೂ ಸಂತುಷ್ಟರಾಗಿದ್ದಾರೆ.
ಕೊಲ್ಲಂ ಕಲೋತ್ಸವಕ್ಕೆ ಬರುವವರಿಗೆ ಉಚಿತ ವಾಹನ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 30 ಬಸ್ ಗಳು, ಆಟೋಗಳನ್ನು ಸಿದ್ಧಪಡಿಸಲಾಗಿದೆ.ವಿವಿಧ ಸ್ಥಳಗಳಿಗೆ, ನಿವಾಸಗಳಿಗೆ ಹಾಗೂ ಊಟೋಪಚಾರ ಇರುವಲೆ ಬಸ್ ಗಳು ಉಚಿತ ಸೇವೆ ನೀಡಲಿವೆ.ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಸೇವೆ ಲಭ್ಯವಿರುತ್ತದೆ.





