ಕಾಸರಗೋಡು: ಟ್ರಾನ್ಸ್ ಜೆಂಡರ್ ಮತದಾರರಿಗೆ ವೋಟಿಂಗ್ ಮಿಷನ್ ಬಗ್ಗೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸಮಗ್ರ ಮಾಹಿತಿ ಒದಗಿಸಿದರು. ಈ ಸಂದರ್ಭ ಟ್ರಾನ್ಸ್ ಜೆಂಡರ್ ಮತದಾರರ ಚುನಾವಣೆ ಬಗ್ಗೆ ಇರುವ ಸಂಶಯಗಳನ್ನು ಜಿಲ್ಲಾಧಿಕಾರಿ ನಿವಾರಿಸಿ, ಈ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ನಾಲ್ವರು ಚೊಚ್ಚಲ ಮತದಾರರು ಸೇರಿದಂತೆ ಒಟ್ಟು ಏಳು ಮಂದಿ ಟ್ರಾನ್ಸ್ ಜೆಂಡರ್ ಮತದಾರರಿದ್ದಾರೆ.
ಜಿಲ್ಲಾದಿಕಾರಿ ಮಿನಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ.ಕೈನಿಕ್ಕರ, ಸ್ವೀಪ್ ನೋಡಲ್ ಆಫೀಸರ್ ಟಿ.ಟಿ.ಸುರೇಂದ್ರನ್ ಉಪಸ್ಥಿತರಿದ್ದರು. ಜಿಲ್ಲಾ ಮಾಸ್ಟರ್ ಟ್ರೇನರ್ ಕೆ.ವಿ.ಧನಂಜಯನ್ ಜಾಗೃತಿ ತರಗತಿ ನಡೆಸಿದರು. ಟ್ರಾನ್ಸ್ ಜೆಂಡರ್ ಸಂಘಟನೆಯಾದ 'ಕ್ಷೇಮಾ' ಅಧ್ಯಕ್ಷ ಈಶಾ ಕಿಶೋರ್, ಸೆಕ್ರೆಟರಿ ಶಂಸೀನ ಸಮದ್, ಟ್ರಾನ್ಸ್ ಜೆಂಡರ್ ಮತದಾರರಾದ ಕಾರ್ತಿಕ ರತೀಶ್, ಹುದಾ ಮುನೀರ್, ಫಾತಿಮಾ ಜುನಾಸ್, ಚಾರುಲತಾ, ಎಂ.ಸಿ.ಸಜೀರ್, ಸಾಮಾಜಿಕ ನ್ಯಾಯದ ಸೀನಿಯರ್ ಸೂಪ್ರೆಂಡ್ ಎಂ.ಅಬ್ದುಲ್ಲಾ ಉಪಸ್ಥಿತರಿದ್ದರು.


