ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ಕುಟಿಪ್ಪುರಂ ಪೋಲೀಸ್ ಠಾಣೆ 2023ರಲ್ಲಿ ದೇಶದ ಟಾಪ್ ಟೆನ್ ಪೆÇಲೀಸ್ ಠಾಣೆಗಳಲ್ಲಿ ಒಂದಾಗಿದೆ.
ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ. ವಿವಿಧ ರಾಜ್ಯಗಳಿಂದ ಬಂದ 17,000 ಅರ್ಜಿಗಳಲ್ಲಿ ಅತ್ಯುತ್ತಮ ಪೋಲೀಸ್ ಠಾಣೆಯನ್ನು ಆಯ್ಕೆ ಮಾಡಲಾಗಿದೆ.
ದೇಶದ ಪ್ರಮುಖ ಹತ್ತು ಪೋಲೀಸ್ ಠಾಣೆಗಳಲ್ಲಿ ಕುಟ್ಟಿಪುರಂ ಠಾಣೆ ಒಂಬತ್ತನೇ ಸ್ಥಾನದಲ್ಲಿದೆ. ಆದರೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. 2023 ರಲ್ಲಿ, ದಾಖಲಾದ ದೂರುಗಳು, ಪ್ರಕರಣಗಳ ವಿಲೇವಾರಿ, ಚಾರ್ಜ್ ಶೀಟ್‍ಗಳ ಸಮಯೋಚಿತ ಸಲ್ಲಿಕೆ, ಪ್ರಕರಣಗಳ ಸಂಖ್ಯೆ, ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲಿನ ದೌರ್ಜನ್ಯಗಳ ಪರಿಹಾರವನ್ನು ಆಧರಿಸಿ ಸಾಧನೆಯಾಗಿದೆ.
ಫೆಬ್ರವರಿ 6 ರಂದು ತಿರುವನಂತಪುರಂನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕುಟ್ಟಿಪುರಂ ಪೋಲೀಸ್ ಠಾಣಾಧಿಕಾರಿಗೆ ಗೌರವ ಪ್ರದಾನ ಮಾಡಲಿದ್ದಾರೆ.


