ಕುಂಬಳೆ: ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಎನ್. ಎಸ್ ಎಸ್. ಘಟಕವು ಬಾಡೂರು ಎ. ಎಲ್. ಪಿ. ಶಾಲೆಯಲ್ಲಿ ಡಿಸೆಂಬರ್ 26 ರಿಂದ ಜನವರಿ 1 ರವರೆಗೆ ಆಯೋಜಿಸಿದ ಏಳು ದಿನಗಳ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು. ಮಾಲಿನ್ಯ ಮುಕ್ತ ಕೇರಳ ಯೋಜನೆಯ ಅಂಗವಾಗಿ ಕಟ್ಟತ್ತಡ್ಕ ಕೂಡು ರಸ್ತೆಯಲ್ಲಿ ವಿದ್ಯಾರ್ಥಿಗಳು ನಿರ್ಮಿಸಿದ ಸ್ನೇಹಾರಾಮ (ಸ್ನೇಹದ ಉದ್ಯಾನ) ವನ್ನು ಉದ್ಘಾಟಿಸುವ ಮೂಲಕ ಮಂಜೇಶ್ವರ ಶಾಸಕ ಎ. ಕೆ. ಎಂ ಅಶ್ರಫ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು.
ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತಿ ಉಪಾಧ್ಯಕ್ಷೆ ಜಯಂತಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಎಚ್. ಅಬ್ದುಲ್ ಮಜೀದ್, ಪಂಚಾಯತಿ ಸದಸ್ಯರಾದ ಪಾಲಾಕ್ಷ ರೈ, ಎಸ್. ಆರ್. ಕೇಶವ, ಬಿ. ಕೆ. ಕಾವ್ಯಶ್ರೀ, ಸಿ.ಎಂ. ಅಸಿಫ್ ಅಲಿ, ಅನಿತಾ, ಪುತ್ತಿಗೆ ಪಂಚಾಯತಿ ಮಾಜಿ ಉಪಾಧ್ಯಕ್ಷ ಪಿ. ಬಿ. ಮೊಹಮ್ಮದ್, ಎಣ್ಮಕಜೆ ಪಂಚಾಯತಿ ಮಾಜಿ ಉಪಾಧ್ಯಕ್ಷೆ ಎ.ಎ.ಆಯಿμÁ, ಮುಖ್ಯೋಪಾಧ್ಯಾಯ ಎನ್. ಕೆ.ಸುಧೀರ್, ಪ್ರಾಂಶುಪಾಲೆ ವಿಜಯಲಕ್ಷ್ಮಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಬೈರ್, ವಿಲ್ಸನ್ ಡಿಸೋಜ, ಎನ್. ಎಸ್. ಎಸ್. ಯೋಜನಾಧಿಕಾರಿ ಸಂತೋಷ ಕುಮಾರ್ ಕ್ರಾಸ್ತಾ ಉಪಸ್ಥಿತರಿದ್ದರು. ಉತ್ತಮ ಶಿಬಿರಾರ್ಥಿಗಳಾದ ಅಜಿತ್ ಮತ್ತು ಪ್ರತಿಭಾ ಅವರಿಗೆ ಬಹುಮಾನವನ್ನು ವಿತರಿಸಲಾಯಿತು.




.jpg)
