ಮಂಜೇಶ್ವರ: ಕೋಳ್ಯೂರು ಶ್ರೀಶಂಕರನಾರಾಯಣ ಸನ್ನಿಧಿಯ ಮಂಡಲ ಪೂಜೆಯ ಪ್ರಯುಕ್ತ ಜ.4 ರಂದು ಅಪರಾಹ್ನ 2.30 ರಿಂದ ಹವ್ಯಾಸಿ ಯಕ್ಷಬಳಗ ಕೋಳ್ಯೂರು ತಂಡದವರಿಂದ ಗಣೇಶೋದ್ಭವ, ಗದಾಯುದ್ದ ಯಕ್ಷಗಾನ ಬಯಲಾಟ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಪುತ್ತಿಗೆ ರಘುರಾಮ ಹೊಳ್ಳಡೂರು ಲಕ್ಷ್ಮೀನಾರಾಯಣ ರಾವ್, ವೇಣು ಮಾಂಬಾಡಿ, ರಾಮದಾಸ ವಗೆನಾಡು, ಭಾರ್ಗವಕೃಷ್ಣ ಬಲಿಪಗುಳಿ, ಮುರಾರಿ ಭಟ್ ಪಂಜಿಗದ್ದೆ ಅವರು ಹಿಮ್ಮೇಳದಲ್ಲಿ ಪ್ರಸಂಗ ಮುನ್ನಡೆಸುವರು. ಪಾತ್ರವರ್ಗದಲ್ಲಿ ಅವಿನಾಶ್ ಹೊಳ್ಳ ವರ್ಕಾಡಿ, ಸತೀಶ ಸುವರ್ಣ ದೈಗೋಳಿ, ಮಹಾಬಲೇಶ್ವರ ಭಟ್ ಭಾಗಮಂಡಲ, ಉದಯಶಂಕರ ಕೊರತ್ತಿಗುಂಡಿ, ಸುರೇಶ ಚಕ್ರಕೋಡಿ, ಆ.ಬಾಲಸುಬ್ರಹ್ಮಣ್ಯ ಭಟ್ ಬರೆಮನೆ, ಪ್ರಣವ ನೇಣಾರು, ಅಧ್ವೈತ ಭಾರದ್ವಾಜ, ವಿಘ್ನೇಶ ಮಿತ್ತಾಳ, ನವೀನ್ ಚಂದ್ರ ಶರ್ಮ, ಅಭಿನವ್ ಸುವರ್ಣ, ಕಿಶೋರ್ ಭಟ್ ಕೊಮ್ಮೆ, ಶಶಿಕಿರಣ ಸುಣ್ಣಂಗುಳಿ, ಗುರುರಾಜ ಹೊಳ್ಳ ಬಾಯಾರು, ಅಭಿಷೇಕ್ ಕೊಮ್ಮೆ, ಚಂದ್ರಕುಮಾರ್ ಬಲಿಪಗುಳಿ, ವಿಠಲ ಭಟ್ ಮೊಗಸಾಲೆ ಮೊದಲಾದವರು ಪಾತ್ರ ನಿರ್ವಹಣೆ ಮಾಡುವರು.





