HEALTH TIPS

ಕೋಟೂರಿನಲ್ಲಿ ಶ್ರೀ ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟ

                      ಮುಳ್ಳೇರಿಯ: ಕೋಟೂರು ಶ್ರೀ ಕಾರ್ತಿಕೇಯ ಸೇವಾ ಸಮಿತಿ ಹಾಗೂ  ಹತ್ತು ಸಮಸ್ತರ ಬಯಲಾಟ ಸಮಿತಿಯ ಸಹಯೋಗದಲ್ಲಿ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೆÇೀಷಿತ ಯಕ್ಷಗಾನ ಮಂಡಳಿಯವರಿಂದ  ಕೋಟೂರಿನಲ್ಲಿ " ಚಕ್ರವ್ಯೂಹ - ದಮಯಂತೀ ಪುನಃ ಸ್ವಯಂವರ "  ಎಂಬ ಪುರಾಣಕಥಾಭಾಗದ ಯಕ್ಷಗಾನ ಬಯಲಾಟ ಪ್ರದರ್ಶನ  ಸಂಪನ್ನವಾಯಿತು.


             ಶ್ರೀಮದ್ ಎಡನೀರು ಮಠಾಧೀಶ ಪರಮಪೂಜ್ಯ  ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರು ಚಿತ್ತೈಸಿ ಅನುಗ್ರಹ ಮಂತ್ರಾಕ್ಷತೆಯನ್ನಿತ್ತು ಸಮಾರಂಭಕ್ಕೆ ಶುಭಹಾರೈಸಿದರು.


         ಬೆಳಗ್ಗೆ ಗಣಹೋಮ , ಮಧ್ಯಾಹ್ನಪೂಜೆ , ಸಂಜೆ ಶ್ರೀ ಗಣಪತಿದೇವರ ಮಾಹಾಪೂಜೆ ಜರಗಿ  ಬಳಿಕ ಶ್ರೀ ದೇವರ ಮೆರವಣಿಗೆಯು  ಭಜನೆ ಘೋಷಗಳೊಂದಿಗೆ ಜರಗಿತು. ಈ ಸಂದರ್ಭದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆಯೂ ಜರಗಿತು. ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು, ಮತ್ತು  ಸಹಸ್ರ ಸಂಖ್ಯೆಯ ಕಾಲಾಭಿಮಾನಿಗಳ ಪೆÇ್ರೀತ್ಸಾದಿಂದ ಕಾರ್ಯಕ್ರಮ ಪ್ರಶಂಸೆಗೆ ಪಾತ್ರವಾಗಿ ಯಶಸ್ವಿಯಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries