HEALTH TIPS

ಈ ತಿಂಗಳು ಬಿಜೆಪಿ ಅಭ್ಯರ್ಥಿ ಪಟ್ಟಿ ಸಾಧ್ಯತೆ: ಪತ್ತನಂತಿಟ್ಟದಲ್ಲಿ ನಟ ಉಣ್ಣಿ ಮುಕುಂದನ್ ಹೆಸರು ಪರಿಗಣನೆಯಲ್ಲಿ?

               ತಿರುವನಂತಪುರಂ: ಕೇರಳದಲ್ಲಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಕೇಂದ್ರ ನಾಯಕತ್ವ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ಸೂಚಿಸಲಾಗಿದೆ.

            ಈ ತಿಂಗಳಲ್ಲೇ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು ಎಂದು ಪಕ್ಷದ ಕೇಂದ್ರ ನಾಯಕತ್ವ ರಾಜ್ಯ ನಾಯಕತ್ವಕ್ಕೆ ಸ್ಪಷ್ಟ ಸೂಚನೆ ನೀಡಿದೆ. ಪ್ರಧಾನಿ ಮೋದಿಯವರ ಕೇರಳ ಭೇಟಿಯಿಂದ ಆಗಿರುವ ಲಾಭವನ್ನು ಚುನಾವಣೆಯಲ್ಲಿ ಬಳಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ.

           ಕೇರಳದಲ್ಲಿ ಬಿಜೆಪಿ ಕೆಲವು ಅನಿರೀಕ್ಷಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಪ್ರಸ್ತುತ ಸುರೇಶ್ ಗೋಪಿ ತ್ರಿಶೂರ್ ನಿಂದ ಸ್ಪರ್ಧಿಸಲಿದ್ದು, ಕೇಂದ್ರ ಸಚಿವ ವಿ. ಮುರಳೀಧರನ್ ಅವರ ಸಂಭಾವ್ಯ ಅಟಿಂಗಲ್ ಹೊರತುಪಡಿಸಿ ರಾಜ್ಯದಲ್ಲಿ ಎ ವರ್ಗದ ಕ್ಷೇತ್ರದಲ್ಲೂ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಏತನ್ಮಧ್ಯೆ, ಪತ್ತನಂತಿಟ್ಟದಲ್ಲಿ ನಟ ಉಣ್ಣಿ ಮುಕುಂದನ್ ಅಭ್ಯರ್ಥಿಯಾಗುವ ಸೂಚನೆಗಳಿವೆ.

             ಪತ್ತನಂತಿಟ್ಟದಲ್ಲಿ ಬಿಜೆಪಿ ನಾಯಕತ್ವದಲ್ಲಿ ಮೂವರು ಮುಂದಿದ್ದಾರೆ. ಇದರಲ್ಲಿ ಕುಮ್ಮನಂ ರಾಜಶೇಖರನ್ ಅವರ ಹೆಸರು ಪ್ರಮುಖವಾಗಿದೆ. ಕುಮ್ಮನಂ ಪತ್ತನಂತಿಟ್ಟ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಅಭ್ಯರ್ಥಿ ಆಯ್ಕೆ ಹಂತ ತಲುಪಿರುವಾಗ ಚಿತ್ರದಲ್ಲಿ ನಟ ಉಣ್ಣಿ ಮುಕುಂದನ್ ಕೂಡ ಇದ್ದಾರೆ ಎಂದು ರಾಜ್ಯದ ಹಿರಿಯ ನೇತಾರರೊಬ್ಬರು ತಿಳಿಸಿದ್ದಾರೆ.

           ಶಬರಿಮಲೆ ಒಳಗೊಂಡಿರುವ ಕ್ಷೇತ್ರದಲ್ಲಿ ಮಾಳಿಗÀಪ್ಪುರಂ ಚಿತ್ರದ ಮೂಲಕ ಕೆರಿಯರ್ ಬ್ರೇಕ್ ಮಾಡಿದ ಉಣ್ಣಿ ಮುಕುಂದನ್ ಅಭ್ಯರ್ಥಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ. ಉಣ್ಣಿ ಮುಕುಂದನ್ ಅವರ ಉಮೇದುವಾರಿಕೆ ಕುರಿತು ಮಾತುಕತೆ ನಡೆದಿದೆ ಎಂದು ವರದಿಯಾಗಿದೆ. ಬಿಜೆಪಿಯನ್ನು ಬಹಿರಂಗವಾಗಿ ಬೆಂಬಲಿಸುವ ಉಣ್ಣಿ ಮುಕುಂದನ್ ಅವರನ್ನು ಪತ್ತನಂತಿಟ್ಟದಲ್ಲಿ ಅಭ್ಯರ್ಥಿಯನ್ನಾಗಿ ತಳ್ಳಿಹಾಕುವಂತಿಲ್ಲ. ಪತ್ತನಂತಿಟ್ಟದಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಕೇಳಿ ಬರುತ್ತಿರುವ ಮತ್ತೊಂದು ಹೆಸರು ಪಿ.ಸಿ. ಜಾರ್ಜ್ ಅವರದು.

           ಹಿಂದಿನ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿದ್ದ ತಿರುವನಂತಪುರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಸ್ಪಷ್ಟ ಚಿತ್ರಣ ರಾಜ್ಯ ನಾಯಕತ್ವಕ್ಕೆ ಇಲ್ಲ. ಶಶಿ ತರೂರ್ ಅವರನ್ನು ಕಣಕ್ಕಿಳಿಸಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬರಬೇಕು ಎಂದು ಹಲವು ರಾಜ್ಯ ನಾಯಕರು ಇಚ್ಛೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವರಾದ ಎಸ್. ಜಯಶಂಕರ್, ರಾಜೀವ್ ಚಂದ್ರಶೇಖರ್ ಹೆಸರು ಕೇಳಿ ಬಂದಿದ್ದರೂ ವಿಐಪಿ ಕ್ಷೇತ್ರಕ್ಕೆ ಬೇಕಾದಷ್ಟು ಚಟುವಟಿಕೆ ನಡೆಯುತ್ತಿಲ್ಲ. ತಿರುವನಂತಪುರಕ್ಕೆ ಅನಿರೀಕ್ಷಿತ ಅಭ್ಯರ್ಥಿ ಆಗಮಿಸಬಹುದು ಎಂದು ಸೂಚಿಸಲಾಗಿದ್ದು, ಪ್ರಬಲ ಪೈಪೆÇೀಟಿಗೆ ವೇದಿಕೆ ಸಜ್ಜಾಗಿದೆ.


            


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries