ತಿರುವನಂತಪುರ: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಾಹುಲ್ ಮಂಕೂತ್ತಿಲ್ ಬಂಧನವನ್ನು ಸಮರ್ಥಿಸಿಕೊಂಡಿರುವ ಸಚಿವ ಪಿ.ರಾಜೀವ್. ಯುಡಿಎಫ್ ಅವಧಿಯಲ್ಲಿ ಶಾಸಕರನ್ನು ಮಧ್ಯರಾತ್ರಿ ಬಂಧಿಸಲಾಗಿತ್ತು ಎಂದಿರುವÀರು. ತಿರುವನಂತಪುರದಲ್ಲಿ ಮಾಧ್ಯಮದವರೊಂದಿಗೆ ಸಚಿವರು ಮಾತನಾಡುತ್ತಿದ್ದರು.
ವಿರೋಧ ಪಕ್ಷಕ್ಕೆ ಹೇಳಲು ಏನೂ ಇಲ್ಲ. ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಅವರು ನಿಲುವು ತೆಗೆದುಕೊಳ್ಳುತ್ತಿಲ್ಲ. ಪೋಲೀಸರಿಗೆ ರಾಜಕೀಯ ಇಲ್ಲ. ಅವರು ಕಾನೂನಾತ್ಮಕವಾಗಿ ಮುಂದುವರಿಯುತ್ತಾರೆ. ಈ ಕ್ರಮವನ್ನು ಪೋಲೀಸರು ಯಾವುದೇ ಪಟ್ಟಭದ್ರ ಹಿತಾಸಕ್ತಿಯಿಂದ ನೋಡಬಾರದು ಎಂದರು.
ಮುಷ್ಕರದ ವೇಳೆ ಕೆಲವೆಡೆ ಹಿಂಸಾಚಾರ ನಡೆದಿದೆ ಎಂದು ಸ್ವತಃ ಯುಡಿಎಫ್ ಸಂಚಾಲಕರೇ ಹೇಳಿದ್ದರು. ಆಗ ಸಹಜವಾಗಿಯೇ ಇಂತಹ ಪ್ರಕರಣಗಳು ಬರುತ್ತವೆ. ಪ್ರಕರಣಗಳಲ್ಲಿ ಪೆÇಲೀಸರು ಬಂಧಿಸುತ್ತಾರೆ. ಕೆಲವರಿಗೆ ನ್ಯಾಯಾಲಯ ರಿಮಾಂಡ್ ಮತ್ತು ಕೆಲವರಿಗೆ ನ್ಯಾಯಾಲಯ ಜಾಮೀನು ನೀಡುತ್ತದೆ. ವಿರೋಧ ಮುಂದುವರಿದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.


