ಕೊಚ್ಚಿ: ಮೆಟ್ರೋ ಪ್ರಯಾಣಕ್ಕಾಗಿ ವಾಟ್ಸಾಪ್ ಕ್ಯೂಆರ್ ಟಿಕೆಟ್ ಸೌಲಭ್ಯದೊಂದಿಗೆ ಕೊಚ್ಚಿ ಮೆಟ್ರೋ ಉಪಕ್ರಮಿಸಿದೆ. ಮೆಟ್ರೋ ಪ್ರಯಾಣಕ್ಕೆ ಟಿಕೆಟ್ ಖರೀದಿಸಲು ಸರತಿ ಸಾಲಿನಲ್ಲಿ ನಿಲ್ಲದೆ ವಾಟ್ಸಾಪ್ ನಿಂದಲೇ ಟಿಕೆಟ್ ಬುಕ್ ಮಾಡುವ ಹೊಸ ಸೌಲಭ್ಯವನ್ನು ಕೊಚ್ಚಿ ಮೆಟ್ರೋ ಪರಿಚಯಿಸಿದೆ.
ಮೆಟ್ರೋ ಕಾರ್ಪೋರೇಟ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಚಲನಚಿತ್ರ ತಾರೆ ಮಿಯಾ ಜಾರ್ಜ್ ಚಾಲನೆ ನೀಡಿದರು.
ಬುಧವಾರದಿಂದ ನೀವು ವಾಟ್ಸ್ ಆಫ್ ಕ್ಯು.ಆರ್. ಕೋಡ್ ಟಿಕೆಟ್‍ಗಳನ್ನು ಬಳಸಿಕೊಂಡು ಪ್ರಯಾಣಿಸಬಹುದು. ಒಂದು ನಿಮಿಷದಲ್ಲಿ ಟಿಕೆಟ್‍ಗಳನ್ನು ಬುಕ್ ಮಾಡಬಹುದು ಎಂಬುದು ಇದರ ದೊಡ್ಡ ವೈಶಿಷ್ಟ್ಯ.
ಹೊಸ ವಷರ್Àಕ್ಕೆ ಕೊಚ್ಚಿ ಮೆಟ್ರೊ ಒಂದು ಕೋಟಿಗೂ ಹೆಚ್ಚು ಪ್ರಯಾಣಿಕರೊಂದಿಗೆ ಕಾಲಿಡುತ್ತಿರುವುದರಿಂದ ಮೆಟ್ರೊ ಅಧಿಕಾರಿಗಳ ಕಡೆಯಿಂದ ಪ್ರಯಾಣಿಕರನ್ನು ಸೆಳೆಯಲು ಹೆಚ್ಚಿನ ಚಟುವಟಿಕೆಗಳು ನಡೆಯಲಿವೆ ಎಂದು ಕೆಎಂಆರ್‍ಎಲ್ ವ್ಯವಸ್ಥಾಪಕ ನಿರ್ದೇಶಕ ಲೋಕನಾಥ್ ಬೆಹ್ರಾ ಹೇಳಿದ್ದಾರೆ. ಮೆಟ್ರೋ ಪ್ರಯಾಣಿಕರಿಗೆ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಲು ವಾಟ್ಸಾಪ್ ಕ್ಯೂಆರ್ ಕೋಡ್ ಟಿಕೆಟಿಂಗ್ ವ್ಯವಸ್ಥೆಯನ್ನು ಸಿದ್ಧಪಡಿಸಲಾಗಿದೆ.
ಇದೇ ವೇಳೆ, ಕೊಚ್ಚಿ ಒನ್ ಮೆಟ್ರೋ ಕಾರ್ಡ್ ಬಳಸಿ ಕೊಚ್ಚಿ ಮೆಟ್ರೋ ಮತ್ತು ವಾಟರ್ ಮೆಟ್ರೋ ಜೊತೆಗೆ ಮೆಟ್ರೋ ಫೀಡರ್ ಬಸ್‍ಗಳು ಮತ್ತು ಆಟೋಗಳಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಪ್ರಯತ್ನಿಸಲಾಗುತ್ತಿದೆ ಎಂದು ಬೆಹ್ರಾ ಹೇಳಿದರು.
ಕೊಚ್ಚಿ ಮೆಟ್ರೋ ರೈಲ್ ಲಿಮಿಟೆಡ್ ವಾಟ್ಸ್ ಆಫ್ ಸಂಖ್ಯೆ 9188957488 ಗೆ 'ಹಾಯ್' ಎಂದು ಕಳುಹಿಸಬೇಕು. ಪ್ರಾಂಪ್ಟ್‍ಗಳಿಂದ ಕ್ಯು.ಆರ್. ಟಿಕೆಟ್ ಆಯ್ಕೆಯನ್ನು ಆಯ್ಕೆಮಾಡಿಟ್ಬಳಿಕ ಬುಕ್ ಟಿಕೆಟ್ ಆಯ್ಕೆಯನ್ನು ಆಯ್ಕೆ ಮಾಡಬಹುದು. ಪಟ್ಟಿಯಿಂದ ನಿಮ್ಮ ಪ್ರಯಾಣ ಆರಂಭ ಮತ್ತು ಇಳಿಯುವ ನಿಲ್ದಾಣಗಳನ್ನು ಆಯ್ಕೆ ಮಾಡಬಹುದು. ಅದರ ನಂತರ ಪ್ರಯಾಣಿಕರ ಸಂಖ್ಯೆಯನ್ನು ದಾಖಲಿಸಬೇಕು. ನಂತರ, ಪಾವತಿಯನ್ನು ಮಾಡಬಹುದು ಮತ್ತು ಟಿಕೆಟ್ ಅನ್ನು ಸುರಕ್ಷಿತಗೊಳಿಸಬಹುದು.
ಟಿಕೆಟ್ ರದ್ದು ಮಾಡಲು ಕೇವಲ 'ಹಾಯ್' ಎಂದು ಕಳುಹಿಸಬೇಕು. ಈ ರೀತಿಯಾಗಿ, ನೀವು ಕ್ಯು.ಆರ್. ಕೋಡ್ ಮೂಲಕ ಬುಕ್ ಮಾಡಿದ ಟಿಕೆಟ್ ಅನ್ನು ಬಳಸಿಕೊಂಡು 40 ನಿಮಿಷಗಳಲ್ಲಿ ಪ್ರಯಾಣಿಸಬಹುದು.





