HEALTH TIPS

ಫೆ. 6ರಿಂದ ಕೇರಳ ಅರಬಿಕ್ ಮುಂಶೀಸ್ ಅಸೋಸಿಯೇಷನ್ ರಾಜ್ಯ ಸಮ್ಮೇಳನ

  

                 ಕಾಸರಗೋಡು: ಕೇರಳ ರಾಜ್ಯ ರಚನೆಗೆ ಮುಂಚಿನ ಮತ್ತು ರಾಜ್ಯ ಕ್ಯೂ ಐ ಪಿ ಸದಸ್ಯರಾಗಿರುವ ಕೇರಳ ಅರಬಿಕ್ ಮುಂಶೀಸ್ ಅಸೋಸಿಯೇಷನ್(ಕೆ.ಎ.ಎಂ.ಎ) 72 ನೇ ರಾಜ್ಯ ಸಮ್ಮೇಳನ ಫೆ. 6ರಿಂದ 8ರ ವರೆಗೆ ಕಾಸರಗೋಡು ನಗರಸಭಾಂಗಣದ 'ಸಿ.ಎಚ್. ನಗರ'ದಲ್ಲಿ ಜರುಗಲಿದೆ.  "ಬಹುಭಾಷಾ - ಬಹುತ್ವ" ಎಂಬ ಘೋಷಣೆಯೊಂದಿಗೆ ಸಮ್ಮೇಳನ ನಡೆಯಲಿದೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ಎನ್. ಎನೆಲ್ಲಿಕುನ್ನು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

                    ಫೆ.6ರಂದು ಬೆಳಗ್ಗೆ 9 ಗಂಟೆಗೆ ರಾಜ್ಯಾಧ್ಯಕ್ಷ ಎ.ಎ.ಜಾಫರ್ ಧ್ವಜಾರೋಹಣ ನೆರವೇರಿಸುವರು. ನೋಂದಣಿ, ಪ್ರಾಚ್ಯವಸ್ತು ಮತ್ತು ವಸ್ತುಸಂಗ್ರಹಾಲಯ ಖಾತೆ  ಸಚಿವ ರಾಮಚಂದ್ರನ್ ಸಮಾರಂಭ ಗಡ್ನಪಲ್ಲಿ ಉದ್ಘಾಟಿಸುರು.  ಸ್ವಾಗತ ಸಂಘದ ಅಧ್ಯಕ್ಷ, ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು.   ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್ ಮುಖ್ಯ ಅತಿಥಿಗಳಾಗಿ ಆಭಾಗವಹಿಸುವರು. ಶಾಸಕರದ ಸಿ.ಎಚ್. ಕುಞಂಬು,  ಇ.ಚಂದ್ರಶೇಖರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಕೀಲ ಇಬ್ರಾಹಿಂ ಪಳ್ಳಂಗೋಡ್ ಮುಖ್ಯ ಭಾಷಣ ಮಾಡುವರು.  ಮಾಜಿ ಸಚಿವ ಸಿ.ಟಿ.ಅಹ್ಮದಲಿಯವರು ವಿದ್ಯಾಭ್ಯಾಸ ಸಮ್ಮೇಳನವನ್ನು ಉದ್ಘಾಟಿಸುವರು.  ಕೆ.ಎ.ಎಂ.ಎ. ನೀಡುತ್ತಿರುವ  ಸಿ.ಎಚ್ ಶಿಹಾಬ್ ತಂಗಳ್ ಮತ್ತು ಎಂ.ಎಸ್.ಮೌಲ್ವಿ ಸ್ಮರಣಾರ್ಥ ಪ್ರಶಸ್ತಿಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಗುವುದು.

           ಶಾಸಕ ಎ.ಕೆ.ಎಂ.ಅಶ್ರಫ್ ಅವರು ಸಿ.ಎಚ್ ಶಿಹಾಬ್ ತಂಗಳ್ ಸಮಸ್ಮರಣಾ ಉಪನ್ಯಾಸ ನೀಡುವರು. ಕಾಸರಗೋಡು ಸರ್ಕಾರಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಇ.ಅಬ್ದುನ್ನಾಸರ್ ಅರಬಿಕ್ ಭಾಷಾ ಸಮ್ಮೇಳನ ಉದ್ಘಾಟಿಸುವರು. ಕೆ.ಎಂ.ಅಬ್ದುಲ್ ಕರೀಂ ವಿಷಯ ಮಂಡಿಸುವರು.

           ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮಹಿಳಾ ಸಮಾವೇಶ ಉದ್ಘಾಟಿಸುವರು. ಕಾರ್ಯಕ್ರಮದ ಅಂಗವಾಘಿ ಅರಬಿಕ್ ಶಿಕ್ಷಕರಿಂದ  ಜಾಥಾ  ನಡೆಯಲಿದೆ. ಫೆ. 7 ರಂದು ಪ್ರತಿನಿಧಿ ಸಮ್ಮೇಳನ,  ಸಾಂಸ್ಕøತಿಕ ಸಭೆ, ಸಂಗೀತ ಕಾರಂಜಿ ಹಾಗೂ ಫೆ.8 ರ ಗುರುವಾರ ವೈಜ್ಞಾನಿಕ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು. 

            ಸುದ್ದಿಗೋಷ್ಟಿಯಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕಣ್ಣೂರು ಅಬ್ದುಲ್ಲಾ ಮಾಸ್ಟರ್, ಪ್ರಧಾನ ಸಂಚಾಲಕ ಸಿರಾಜುದ್ದೀನ್ ಎಸ್.ಎಂ, ರಾಜ್ಯ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಮಜೀದ್, ಸಿ ಎ  ಅಬ್ದುಲ್ಲಕುಞÂ ಚಾಲ ಉಪಸ್ಥಿತರಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries