ಬರ್ಲಿನ್: ಜರ್ಮನಿಯ ಪ್ರಮುಖ ವಿಮಾನ ನಿಲ್ದಾಣಗಳ ಭದ್ರತಾ ಸಿಬ್ಬಂದಿ ಗುರುವಾರ ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸಿದ್ದರಿಂದ ಹಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಯಿತು. ಇದರಿಂದಾಗಿ ಲಕ್ಷಾಂತರ ಪ್ರಯಾಣಿಕರು ಪರದಾಡಿದರು.
0
samarasasudhi
ಫೆಬ್ರವರಿ 02, 2024
ಬರ್ಲಿನ್: ಜರ್ಮನಿಯ ಪ್ರಮುಖ ವಿಮಾನ ನಿಲ್ದಾಣಗಳ ಭದ್ರತಾ ಸಿಬ್ಬಂದಿ ಗುರುವಾರ ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸಿದ್ದರಿಂದ ಹಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಯಿತು. ಇದರಿಂದಾಗಿ ಲಕ್ಷಾಂತರ ಪ್ರಯಾಣಿಕರು ಪರದಾಡಿದರು.
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 'ವೆರ್.ಡಿ ಯೂನಿಯನ್' ಪ್ರತಿಭಟನೆಗೆ ಕರೆಕೊಟ್ಟಿತ್ತು.
ಫ್ರಾಂಕ್‌ಫರ್ಟ್, ಬರ್ಲಿನ್, ಕೊಲಾಗ್ನೆ, ಹಂಬರ್ಗ್, ಸ್ಟಟ್ಟ್‌ಗರ್ಟ್, ಲೇಪ್ಸಿಗ್, ಹನ್ನೊವೆರ್, ಡ್ರೆಸ್ಡೆನ್, ಬ್ರೆಮೆನ್ ಮತ್ತು ಎರ್ಫರ್ಟ್ ವಿಮಾನ ನಿಲ್ದಾಣಗಳ ಭದ್ರತಾ ಸಿಬ್ಬಂದಿ ಗುರುವಾರ ಕರ್ತವ್ಯಕ್ಕೆ ಗೈರಾಗಿದ್ದರು.
ಬರ್ಲಿನ್, ಹಂಬರ್ಗ್ ಮತ್ತು ಸ್ಟಟ್ಟ್‌ಗರ್ಟ್ ವಿಮಾನ ನಿಲ್ದಾಣಗಳಲ್ಲಿ ಪ್ರತಿಭಟನೆ ಆರಂಭವಾಗುವ ಮೊದಲೇ ಎಲ್ಲ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ಕೊಲೊಗ್ನೆ ಮತ್ತು ಡಸ್ಸೆಲ್‌ಡಾರ್ಫ್ ವಿಮಾನನಿಲ್ದಾಣಗಳಲ್ಲಿ ಶೇ 75 ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
'ವಿಮಾನ ನಿಲ್ದಾಣ ನಿಯಂತ್ರಣ ತಂಡ 'ಎಡಿವಿ' ಪ್ರಕಾರ 1,100 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಮತ್ತು ಮುಂದೂಡಲಾಗಿದೆ. ಇದರಿಂದ ಸುಮಾರು ಎರಡು ಲಕ್ಷ ಪ್ರಯಾಣಿಕರು ಪರಾದಾಡಿದರು' ಎಂದು ಜರ್ಮನ್ ಸುದ್ದಿ ಸಂಸ್ಥೆ ಡಿಪಿಎ ವರದಿ ಮಾಡಿದೆ.