ತಿರುವನಂತಪುರಂ: ಕೆಎಸ್‍ಆರ್‍ಟಿಸಿ ರಾಜ್ಯದ 22 ಸ್ಥಳಗಳಲ್ಲಿ ಡ್ರೈವಿಂಗ್ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ. ಪರೀಕ್ಷಾ ಮೈದಾನಗಳನ್ನು ಒಳಗೊಂಡಂತೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ಕುರಿತು ಕೆಎಸ್‍ಆರ್‍ಟಿಸಿ ಎಂಡಿ ಪ್ರಮೋಜ್ ಶಂಕರ್ ಅಧಿಕಾರಿಗಳಿಗೆ ಸೂಚನೆ ನೀಡಿರುವÀರು. ಮಾರ್ಚ್ 30ರೊಳಗೆ ಡ್ರೈವಿಂಗ್ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈ ವೇಳೆಯಲ್ಲಿ ಮೂಲಸೌಕರ್ಯಗಳನ್ನು ಸಿದ್ಧಪಡಿಸಿ ಎಂವಿಡಿ ಡ್ರೈವಿಂಗ್ ಸ್ಕೂಲ್ ಲೈಸೆನ್ಸ್ ಪಡೆದುಕೊಳ್ಳುವಂತೆ ಡಿಪೆÇೀ ಮುಖ್ಯಸ್ಥರಿಗೆ ತುರ್ತಾಗಿ ಸೂಚಿಸಲಾಯಿತು.
ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ತಕ್ಷಣ ಆನ್‍ಲೈನ್‍ನಲ್ಲಿ ಸಲ್ಲಿಸಬೇಕು. ತರಗತಿ ಕೊಠಡಿ, ತರಬೇತಿ ಸಭಾಂಗಣ, ವಾಹನಗಳು, ಮೈದಾನ, ಕಚೇರಿ, ಪಾರ್ಕಿಂಗ್ ಸೌಲಭ್ಯ ಮತ್ತು ಪರೀಕ್ಷಾ ಮೈದಾನವನ್ನು ಸಿದ್ಧಪಡಿಸಬೇಕು. ತರಬೇತುದಾರರನ್ನೂ ನೇಮಿಸಬೇಕು. ಕೇಂದ್ರ ಮತ್ತು ಪ್ರಾದೇಶಿಕ ಕಾರ್ಯಾಗಾರ ಮುಖ್ಯಸ್ಥರು ತರಬೇತಿ ಸಭಾಂಗಣಕ್ಕೆ ಅಗತ್ಯ ಯಂತ್ರೋಪಕರಣಗಳನ್ನು ಹೊಂದಿಸಬೇಕು.
ತರಬೇತಿ ವಾಹನಗಳಿಗೆ ಎರಡು ವಾರಗಳಲ್ಲಿ ಡ್ಯುಯಲ್ ಕಂಟ್ರೋಲ್ ಸಿಸ್ಟಮ್ ಅಥವಾ ಕ್ಲಚ್ ಬ್ರೇಕ್ ಅಳವಡಿಸಲಾಗುವುದು. ತಿರುವನಂತಪುರಂ ಸಿಬ್ಬಂದಿ ತರಬೇತಿ ಕಾಲೇಜಿನ ಮುಖ್ಯಸ್ಥರು ಪ್ರಭಾರಿಯಾಗಿದ್ದಾರೆ. ಅಟ್ಟಕುಳಂಗರ, ಎಡಪಳ್ಳಿ, ಅಂಗಮಾಲಿ, ಪಾರಶ್ಶಾಲ, ಈಂಚಕಲ್, ಅಣಯಾರ, ಅಟ್ಟಿಂಗಲ್, ಚತ್ತನ್ನೂರ್, ಚತಯಮಂಗಲಂ, ಮಾವೇಲಿಕ್ಕರ, ಪಂದಳಂ, ಪಾಲ, ಕುಮಳಿ, ಅಂಗಮಾಲಿ, ಪೆರುಂಬವೂರು, ಚಾಲಕುಡಿ, ನಿಲಂಬೂರ್, ಪೆÇನ್ನಾನಿ, ಚಿತ್ತೂರು, ಕೋಝಿಕ್ಕೋಡ್, ಮಾನಂದವಾಡಿ,ತಲಚ್ಚೇರಿ, ಕಾಞಂಗಾಡ್ ಗಳಲ್ಲಿ ಡ್ರೈವಿಂಗ್ ಶಾಲೆಗಳು ಬರಲಿವೆ.





