ತ್ರಿಶೂರ್: ಈ ತಿಂಗಳ ಆರಂಭದಿಂದ ಗುರುವಾಯೂರು ಶ್ರೀಕ್ಷೇತ್ರದ ಆದಾಯದಲ್ಲಿ ಏರಿಕೆಯಾಗಿದ್ದು, 5,21,68,713 ರೂ.ಕಾಣಿಕೆ ಸಂಗ್ರಹವಾಗಿದೆ. ಜೊತೆಗೆ 2.526 ಕೆಜಿ ಚಿನ್ನ ಮತ್ತು 18.380 ಕೆಜಿ ಬೆಳ್ಳಿ ಲಭಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾಣಿಕೆಯಲ್ಲಿ 41 ನಿಷೇಧಿತ ನೋಟುಗಳಿದ್ದವು ಎಂದು ಮಾಹಿತಿ ನೀಡಲಾಗಿದೆ.
ಸಿಎಸ್‍ಬಿ ಗುರುವಾಯೂರು ಶಾಖೆ ಈ ಬಾರಿ ಎಣಿಕೆಯ ಹೊಣೆ ಹೊತ್ತಿತ್ತು. ಇ-ಭಂಡಾರ ಆದಾಯ 7.22 ಲಕ್ಷ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೇವಾಲಯದ ಪೂರ್ವ ಬಾಗಿಲಲ್ಲಿ ಎಸ್‍ಬಿಐನ ಇ-ಭಂಡಾರಂ ಮೂಲಕ 7,22,473 ಸ್ವೀಕರಿಸಲಾಗಿದೆ. ಈ ಅಂಕಿ ಅಂಶವು ಸಾಮಾನ್ಯ ಖಜಾನೆ ಆದಾಯಕ್ಕೆ ಹೆಚ್ಚುವರಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.





