ತಿರುವನಂತಪುರಂ: ಕೇರಳ ವಿಶ್ವವಿದ್ಯಾನಿಲಯದ ಯುವಜನೋತ್ಸವದಲ್ಲಿ ತೀರ್ಪುಗಾರರೋರ್ವರು ಆತ್ಮಹತ್ಯೆ ಮಾಡಿಕೊಂಡ ನಂತರ ಎಸ್‍ಎಫ್‍ಐ ವಿರುದ್ಧದ ಆರೋಪಗಳು ತೀವ್ರಗೊಳ್ಳುತ್ತಿವೆ.
ಎಸ್‍ಎಫ್‍ಐ ಕಾರ್ಯಕರ್ತರು ಆಯುಧಗಳನ್ನು ಬಳಸಿ ಥಳಿಸಿದ್ದಾರೆ ಎಂದು ಆರೋಪಿಗಳು ಬಹಿರಂಗಪಡಿಸಿದ್ದಾರೆ. ಎಸ್‍ಎಫ್‍ಐ ರಾಜ್ಯ ಜಂಟಿ ಕಾರ್ಯದರ್ಶಿ ಅಂಜು ಕೃಷ್ಣ, ಉಪಾಧ್ಯಕ್ಷ ಎ.ಎ.ಅಕ್ಷಯ್, ತಿರುವನಂತಪುರ ಜಿಲ್ಲಾಧ್ಯಕ್ಷ ಎನ್.ಎ. ನಂದನ್ ನೇತೃತ್ವದ ತಂಡ ತಮ್ಮನ್ನು ತಡೆದು ಥಳಿಸಿದ್ದಾರೆ ಎಂದು ಪ್ರಕರಣದ ಆರೋಪಿ ನೃತ್ಯ ತರಬೇತುದಾರರಾದ ಜೋಮತ್ ಮೈಕಲ್ ಮತ್ತು ಸೂರಜ್ ಹೇಳಿದ್ದಾರೆ.
ಸೆನೆಟ್ ಸಭಾಂಗಣದ ಕೊಠಡಿಯಲ್ಲಿ ಊಟ, ನೀರು ಇಲ್ಲದೆ ಗಂಟೆಗಟ್ಟಲೆ ಬಂಧಿಸಿ ಥಳಿಸಲಾಗಿದೆ ಎಂದು ಆರೋಪಿಗಳು ತಿಳಿಸಿದ್ದಾರೆ. ಹೇಳಿದ್ದು ಕೋಳದಿದ್ದರೆ ಕೋಲಿನಿಂದ ತಿನ್ನಬೇಕಾದೀತು ಎಂದು ತೀರ್ಪುಗಾರರ ವಿರುದ್ಧ ಬೆದರಿಕೆ ಹಾಕಿದ್ದ ಬಗ್ಗೆ ಶಾಜಿ ಆರೋಪಿಸಿದ್ದರು. ಶಾಜಿಯನ್ನು ಕ್ರಿಕೆಟ್ ಬ್ಯಾಟ್ ಮತ್ತು ಹಾಕಿ ಸ್ಟಿಕ್‍ನಿಂದ ಹೊಡೆದಿದ್ದಾರೆ ಎಂದು ಜೋಮೆಟ್ ಮೈಕೆಲ್ ಹೇಳಿದ್ದಾರೆ. ಸಾಯುಸುತ್ತೇವೆ ಎಂದು ಸಂಘಟಕರು ಹೇಳಿದ್ದರು ಎಂದು ಜೋಮೆಟ್ ಬಹಿರಂಗಪಡಿಸಿದ್ದಾರೆ.
ಆದರೆ ಈ ರೀತಿ ಥಳಿಸಲಾಗಿಲ್ಲ ಎಂದು ಎಸ್‍ಎಫ್‍ಐ ಆರೋಪಿಸಿದೆ. ಪೋಲೀಸ್ ಠಾಣೆಯಲ್ಲಿ ತೀರ್ಪುಗಾರರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಎಸ್‍ಎಫ್‍ಐ ರಾಜ್ಯ ಉಪಾಧ್ಯಕ್ಷ ಎ.ಎ.ಅಕ್ಷಯ್ ತಿಳಿಸಿದ್ದಾರೆ. ಸಂಘಟಕರ ಬಳಿ ಇದ್ದ ಶಾಜಿ ಅವರ ಪೋನ್‍ಗೆ ನಿರಂತರ ಕರೆಗಳು ಮತ್ತು ಸಂದೇಶಗಳು ಬಂದಾಗ ಪರಿಶೀಲಿಸಲಾಯಿತು. ಅದರಲ್ಲಿ ಕೆಲವು ತಂಡಗಳ ಚೆಸ್ಟ್ ನಂಬರ್ ಸೇರಿದಂತೆ ಸಂದೇಶಗಳಿದ್ದವು.ಶಾಜಿಯ ಪೋನ್ ನಿಂದ ಜೋಮೆಟ್ ಮತ್ತು ಸೂರಜ್ ಗೆ ಕರೆ ಮಾಡಲಾಗಿತ್ತು. ಪೋಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.





