ತಿರುವನಂತಪುರ: ಜನವಸತಿ ಪ್ರದೇಶಗಳಿಗೆ ಕಾಡಾನೆಗಳು ಇಳಿಯದಂತೆ ತಡೆಯಲು ಅರಣ್ಯ ಇಲಾಖೆ ಅರಣ್ಯ ಗಡಿಯಲ್ಲಿ ಜೇನುಗೂಡುಗಳನ್ನು ಸ್ಥಾಪಿಸಲು ಮುಂದಾಗಿದೆ.
ಆಫ್ರಿಕಾ ಮಾದರಿಯಲ್ಲಿ ಜೇನುಗೂಡುಗಳನ್ನು ಅಳವಡಿಸಿದರೆ ಇದೀಗ ಕರಡಿಗಳು ಗುಂಪು ಗುಂಪಾಗಿ ಬಂದು ಜೇನು ಕದಿಯುವ ಆತಂಕವೂ ಇದೆ. ಮುಖ್ಯ ವನ್ಯಜೀವಿ ವಾರ್ಡನ್ ಡಿ. ಜಯಪ್ರಸಾದ್ ಅವರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಬಗ್ಗೆ ನೇಮಕ ಮಾಡಿರುವರು.
ಅರಣ್ಯದ ಗಡಿಯಲ್ಲಿ ವಿಶೇಷ ರೀತಿಯ ಜೇನುಗೂಡುಗಳನ್ನು ಅಳವಡಿಸಿದರೆ ಜೇನುನೊಣಗಳು ಕಾಡಾನೆಗಳನ್ನು ಓಡಿಸುತ್ತವೆ ಎಂಬುದು ಅರಣ್ಯ ಇಲಾಖೆಯ ಊಹೆ. ಕಾಡು ಆನೆಗಳನ್ನು ಓಡಿಸಲು ಆಪ್ರಿಕನ್ ದೇಶಗಳಲ್ಲಿ ಯಶಸ್ವಿಯಾಗಿ ಪ್ರಯೋಗಿಸಲಾದ ತಂತ್ರವನ್ನು ಕೇರಳದಲ್ಲೂ ಜಾರಿಗೆ ತರಲಾಗುತ್ತಿದೆ. ಕರಡಿಗಳ ಉಪಟಳ ಕಡಿಮೆ ಇರುವ ಮಲಯತ್ತೂರು ಪ್ರದೇಶದಲ್ಲಿ ಪರೀಕ್ಷಾರ್ಥವಾಗಿ ಮೊದಲು ಜೇನುಗೂಡುಗಳನ್ನು ಸ್ಥಾಪಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಯಶಸ್ವಿಯಾದರೆ, ಕಾಡಾನೆಗಳಿಂದ ತೊಂದರೆಯಾಗುವ ಸಾಧ್ಯತೆಯಿರುವ ಇತರ ಪ್ರದೇಶಗಳಲ್ಲಿ ಗೂಡುಗಳನ್ನು ಇರಿಸಲಾಗುತ್ತದೆ. ಇದೇ ವೇಳೆ ಜೇನು ತುಪ್ಪದಲ್ಲಿ ಕರಗಿದ ಮೇಣದ ವಾಸನೆ ಹರಡಿದರೆ ಕರಡಿಗಳು ಕಾಡಿನಿಂದ ಹೊರಬರುತ್ತವೆ ಎಂದು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಗಮನಸೆಳೆದಿದ್ದಾರೆ. ಈ ಹಿಂದೆ ತಿರುವನಂತಪುರದ ಪಲೋಡ್ ಪ್ರದೇಶದಲ್ಲಿ ರಬ್ಬರ್ ತೋಟಗಳಲ್ಲಿ ಜೇನುಗೂಡುಗಳನ್ನು ಸ್ಥಾಪಿಸಿದ ನಂತರ, ಕರಡಿಗಳು ಕಾಡಾನೆಗಳಿಗಿಂತ ಹೆಚ್ಚು ಉಪಟಳ ನೀಡಿತ್ತು.





