ತಿರುವನಂತಪುರ: ವಿಷುವಿಗೆ ಮುನ್ನ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿ ಪಿಂಚಣಿಯ ಇನ್ನೂ ಎರಡು ಕಂತುಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ನಿನ್ನೆ ಮಾಹಿತಿ ನೀಡಿದರು. ತಲಾ 3,200 ಸಿಗಲಿದೆ. ಪ್ರಸ್ತುತ ಒಂದು ಕಂತಿನ ಮೊತ್ತವನ್ನು ವಿತರಿಸಲಾಗಿದೆ. ವಿಷು, ಈಸ್ಟರ್ ಮತ್ತು ರಂಜಾನ್ ಸಮಯದಲ್ಲಿ ತಲಾ 4,800.ಗಳು ಒಬ್ಬೊಬ್ಬರ ಕೈಗಳಿಗೆ ಲಭಿಸಲಿದೆ ಎಂದು ತಿಳಿಸಿರುವರು.
ಎಂದಿನಂತೆ ಬ್ಯಾಂಕ್ ಖಾತೆ ಸಂಖ್ಯೆ ನೀಡಿದವರಿಗೆ ತಮ್ಮ ಖಾತೆಯ ಮೂಲಕ ಹಾಗೂ ಇತರರಿಗೆ ಸಹಕಾರಿ ಸಂಘಗಳ ಮೂಲಕ ಪಿಂಚಣಿ ನೇರವಾಗಿ ಮನೆಗೆ ತಲುಪಿಸಲಾಗುವುದು. 62 ಲಕ್ಷ ಕ್ಷೇಮ ಪಿಂಚಣಿ ಫಲಾನುಭವಿಗಳ ಪೈಕಿ ಮಸ್ಟರಿಂಗ್ ಮಾಡಿದ ಎಲ್ಲರಿಗೂ ಮೊತ್ತ ಸಿಗಲಿದೆ. ನಂತರ ಬಜೆಟ್ ನಲ್ಲಿ ಘೋಷಿಸಿದಂತೆ ಆಯಾ ತಿಂಗಳಲ್ಲೇ ಪಿಂಚಣಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವರು ಮಾಹಿತಿ ನೀಡಿದರು.





