HEALTH TIPS

+92 ಆರಂಭಿಕ ಸಂಖ್ಯೆಯಿಂದ ಬರುವ ಕರೆಗಳ ಬಗ್ಗೆ ಎಚ್ಚರ ವಹಿಸಿ: ಸರ್ಕಾರದ ಎಚ್ಚರಿಕೆ

               ವದೆಹಲಿ: ಮೊಬೈಲ್‌ ಸಂಪರ್ಕವನ್ನು ಸ್ಥಗಿತಗೊಳಿಸುವ ಅಥವಾ ಮೊಬೈಲ್ ಸಂಖ್ಯೆ ದುರ್ಬಳಕೆಯಾಗುತ್ತಿದೆ ಎಂದು ಹೇಳುವ ಕರೆಗಳು ವಿದೇಶಿ ಮೂಲದ ಸಂಖ್ಯೆಯಿಂದ ಬರುತ್ತಿದ್ದು, ಈ ಕುರಿತು ಮೊಬೈಲ್ ಬಳಕೆದಾರರು ಜಾಗೃತರಾಗಿರುವಂತೆ ದೂರಸಂಪರ್ಕ ಇಲಾಖೆ ಎಚ್ಚರಿಕೆ ನೀಡಿದೆ.

+92-xxxxxxxxxx ಸಂಖ್ಯೆಯಿಂದ ಬರುವ ಕರೆ ಇದಾಗಿದೆ.

              ಈ ಸಂಖ್ಯೆಯಿಂದ ಬರುವ ಕರೆಗಳಿಂದ ಹಲವರು ವಂಚನೆಗೊಳಗಾಗಿದ್ದಾರೆ ಎಂದು ಬಂದ ದೂರುಗಳನ್ನು ಅನ್ವಯಿಸಿ ಚಕ್ಷು ವರದಿ ಹೇಳಿದ್ದು, ಸಂಚಾರ ಸಾಥಿ ಪೋರ್ಟಲ್‌ ಮೂಲಕ ಅಗತ್ಯ ಮಾಹಿತಿ ನೀಡಲಾಗುತ್ತಿದೆ ಎಂದು ಇಲಾಖೆ ಹೇಳಿದೆ.

                'ದೂರಸಂಪರ್ಕ ಇಲಾಖೆಯಿಂದ ಮಾಡುತ್ತಿರುವ ಕರೆ' ಎಂದು ಹೇಳುತ್ತಿರುವ ಈ ಸಂಖ್ಯೆಯ ಬಳಕೆದಾರರು, ಸೈಬರ್ ದಾಳಿ ನಡೆಸುವ ಅಪಾಯ ಕಂಡುಬಂದಿದೆ. ಹಣವನ್ನು ದೋಚುವ ಸಾಧ್ಯತೆಯೂ ಹೆಚ್ಚು. ಇಂಥ ಕರೆಗಳನ್ನು ಮಾಡುವಂತೆ ಯಾವುದೇ ಸಂಸ್ಥೆಗೆ ದೂರ ಸಂಪರ್ಕ ಇಲಾಖೆ ಯಾವುದೇ ಸೂಚನೆ ನೀಡಲ್ಲ ಮತ್ತು ಕರೆಗಳನ್ನು ಮಾಡುತ್ತಿಲ್ಲ. ಇಂಥ ವಂಚನೆಗೆ ಒಳಗಾದಲ್ಲಿ ಅಥವಾ ತಿಳಿಸಿರುವ ಸಂಖ್ಯೆಗಳಿಂದ ಕರೆಗಳು ಬಂದಲ್ಲಿ ಅವುಗಳ ವಿರುದ್ಧ www.sancharsaathi.gov.in ಅಂತರ್ಜಾಲ ತಾಣದಲ್ಲಿ ದೂರು ದಾಖಲಿಸಬೇಕು' ಎಂದು ತಿಳಿಸಿದೆ.

                   ಜತೆಗೆ ಸಹಾಯವಾಣಿ 1930ಗೆ ಕರೆ ಮಾಡಬಹುದು. ವಂಚಕರ ದಾಳಿಗೆ ಒಳಗಾಗಿದ್ದರೆ www.cybercrime.gov.in ಅಂತರ್ಜಾಲ ತಾಣದಲ್ಲೂ ದೂರು ದಾಖಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries