ಕಾಸರಗೋಡು: ಬೇಡಡ್ಕ ಪಂಚಾಯಿತಿ ಪಡ್ಪು ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವ ಬಗ್ಗೆ ವದಂತಿ ಹರಡಿದ್ದು, ಅರಣ್ಯಾಧಿಕಾರಿಗಳು ಸ್ತಲಕ್ಕೆ ಬೇಟಿ ನೀಡಿ ಹುಲಿಯ ಜಾಡಿನ ಬಗ್ಗೆ ತಪಾಸಣೆ ಆರಂಭಿಸಿದ್ದಾರೆ. ಪಡ್ಪು, ಬಂಡಂಕೈ ಪ್ರದೇಸಗಳಲ್ಲಿ ರಸ್ತೆಗೆ ಅಡ್ಡ ಹುಲಿಯೊಂದು ಸಂಚರಿಸಿರುವುದಾಗಿ ಆಟೋ ಚಾಲಕರೊಬ್ಬರು ತಿಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ದೃಶ್ಯಾವಳಿಯ ವ್ಯಾಪಕ ಪ್ರಚಾರವು ನಡೆಯುತ್ತಿದೆ.
ಈಗಾಗಲೇ ಕಾಡಾನೆ ದಾಳಿಯಿಂದ ಕಂಗೆಟ್ಟಿರುವ ಬೇಡಡ್ಕ, ಮುಳಿಯಾರು ಪಂಚಾಯಿತಿ ಪ್ರದೇಶದ ಜನತೆಗೆ ಹುಲಿ ಕಾಣಿಸಿಕೊಂಡಿರುವ ಬಗ್ಗೆ ಹರಡುತ್ತಿರುವ ವದಂತಿ ಮತ್ತಷ್ಟು ಭೀತಿಯನ್ನು ತಂದೊಡ್ಡಿದೆ. ಈ ಹಿಂದೆ ಪರಪ್ಪ, ಪಾಂಡಿ, ಪುಲಿಪರಂಬ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ವದಂತಿ ಹರಡಿದ್ದು, ನಂತರ ಇದನ್ನು ಅರಣ್ಯಾಧಿಕಾರಿಗಳೂ ಖಚಿತಪಡಿಸಿದ್ದರು. ಈ ಮಧ್ಯೆ ಬೋವಿಕ್ಕಾನ ಒಳಪ್ಪಾರ ಪ್ರದೆಶದಲ್ಲಿ ಸೋಲಾರ್ ಬೇಲಿಗೆ ಹಾನಿಗೈದು ಊರಿಗೆ ಆಗಮಿಸಿದ ಕಾಡಾನೆಗಳು ವ್ಯಾಪಕ ಕ್ರಷಿನಾಶಗೊಳಿಸಿದೆ.



