ಕಾಸರಗೋಡು: ಜಿಲ್ಲಾ ನಾಗರಿಕ ಸರಬರಾಜು ಇಲಾಖೆ ನೇತೃತ್ವದಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯನ್ನು ಮಾ. 15ರಂದು ಆಚರಿಸಲಾಗುವುದು. ಬೆಳಗ್ಗೆ 10ಕ್ಕೆ ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗದ ಸದಸ್ಯೆ ಕೆ.ಜಿ.ಬೀನಾ ಅಧ್ಯಕ್ಷತೆ ವಹಿಸುವರು. ವಕೀಲ ಎ.ರಾಧಾಕೃಷ್ಣನ್ ಅವರು 'ಗ್ರಾಹಕರಿಗೆ ಜವಾಬ್ದಾರಿಯುತ ಮತ್ತು ನ್ಯಾಯೋಚಿತ ನಿರ್ಮಿತ ಬುದ್ಧಿ' ಕುರಿತು ತರಗತಿ ನಡೆಸಲಿದ್ದಾರೆ.



