ಕಾಸರಗೋಡು: ಬಿಜೆಪಿ ನೇತೃತ್ವದ ಎನ್‍ಡಿಎ ಕಾಸರಗೋಡು ಜಿಲ್ಲಾ ಮಟ್ಟದ ಸಮಾವೇಶ ಮಾ 16ರಂದು ಮಧ್ಯಾಹ್ನ 3ಕ್ಕೆ ಕಾಸರಗೋಡು ನಗರಸಭಾ ಟೌನ್‍ಹಾಲ್‍ನಲ್ಲಿ ಜರುಗಲಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿಮುಖ್ಯಮಂತ್ರಿ ಕೆ. ಕರುಣಾಕರನ್ ಅವರ ಪುತ್ರಿ, ಪದ್ಮಜಾವೇಣುಗೋಪಾಲ್ ಸಮಾರಂಭ ಉದ್ಘಾಟಿಸುವರು.
ಬಿಜೆಪಿ ಹಿರಿಯ ಮುಖಂಡ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸಿ.ಕೆ ಪದ್ಮನಾಭನ್ ಮುಖ್ಯ ಭಾಷಣ ಮಾಡುವರು. ಎನ್‍ಡಿಎ ಮಿತ್ರಪಕ್ಷಗಳ ಮುಖಮಡರು, ಜಿಲ್ಲಾ ನೇತಾರರುಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.





