ಕಾಸರಗೋಡು: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ಕನ್ನಡ ವಿಭಾಗದಲ್ಲಿ ಪ್ರಥಮ ಪದವಿ ಓದುತ್ತಿರುವ ಸೈಪಾನ್ ಸಾಬ್ ಖಜೆಸಾಬ್ ಶೇಕ್ ಇವರು ಅಂತಾರಾಷ್ಟ್ರೀಯ ಸಾಫ್ಟ್ ಬೇಸ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ನೇಪಾಳದ ಸಾಫ್ಟ್ ಬೇಸ್ ಬಾಲ್ ಒಕ್ಕೂಟ ಆಯೋಜಿಸಿದ ಏಶಿಯನ್ ಸಾಫ್ಟ್ ಬೇಸ್ ಬಾಲ್ ಗೇಮ್ಸ್ 2023- 24 ನಲ್ಲಿ ಇವರು ಭಾಗವಹಿಸಲಿದ್ದಾರೆ. ಏಪ್ರಿಲ್ 27ರಿಂದ 30 ರ ವರೆಗೆ ನೇಪಾಳದ ಪೆÇೀಖರ ಅರೇನಾದಲ್ಲಿ ಗೇಮ್ಸ್ ನಡೆಯಲಿದ್ದು, ಇವರು ಭಾರತ ತಂಡವನ್ನು ಪ್ರತಿನಿದಿಸಲಿದ್ದಾರೆ.
ರಾಷ್ಟ್ರೀಯ ಸೇವಾಯೋಜನೆ ನಡೆಸುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಲು ಅವರು ಈಗಾಗಲೇ ಆಯ್ಕೆಯಾಗಿರುತ್ತಾರೆ. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲಿರುವ ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಕನ್ನಡ ವಿಭಾಗ, ಗಿಳಿವಿಂಡು ವೇದಿಕೆ, ಕಾಲೇಜಿನ ಅದ್ಯಾಪಕ ವರ್ಗ, ವಿದ್ಯಾರ್ಥಿ ಗಳು, ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.





