ಕೊಚ್ಚಿ: ಉಗಾಂಡಾ ಮೂಲದ ರುಸಿಯಾ ಒರಿಕಿರಿಸಾ ಅವರು ಎರಡು ವರ್ಷಗಳ ಹಿಂದೆ ಕ್ಯಾನ್ಸರ್ ನಿಂದ ಬಳಲಿ ಕೇರಳಕ್ಕೆ ಬಂದಿದ್ದಾಗ ಮರಳಿ ತೆರಳುವ ನಿರೀಕ್ಷೆ ಇದ್ದಿರಲಿಲ್ಲ.
ಮರಣವನ್ನು ಮುಖಾಮುಖಿ ಅನುಭವಿಸಿದಲ್ಲಿಂದ ತೊಡಗಿ ಇದೀಗ 2024 ರ ಉಗಾಂಡಾದ ಅಧ್ಯಕ್ಷರ ವಜ್ರಮಹೋತ್ಸವ ಪ್ರಶಸ್ತಿಯನ್ನು ಪಡೆಯುವವರೆಗೆ ಇವರ ಯಶೋಗಾಥೆ ಸಾಗಿದೆ.
ಕ್ಯಾನ್ಸರ್ ನಿಂದಾಗಿ ನಡೆಯಲೂ ಆಗದ ಸ್ಥಿತಿಯಲ್ಲಿ ಕೇರಳಕ್ಕೆ ಬಂದಿದ್ದಳು ರುಸಿಯಾ ಗಾಲಿಕುರ್ಚಿಯ ಸಹಾಯವೂ ಇಲ್ಲದೆ ಚೇತರಿಸಿಕೊಂಡಿರುವರು. 2022 ರ ಅಕ್ಟೋಬರ್‍ನಲ್ಲಿ ಸ್ತನ ಕ್ಯಾನ್ಸರ್‍ನಿಂದಾಗಿ ರುಸಿಯಾ ಅಲುವಾ ರಾಜಗಿರಿ ಆಸ್ಪತ್ರೆಗೆ ಆಗಮಿಸಿದರು. ಕ್ಯಾನ್ಸರ್ ಕೋಶಗಳು ಯಕೃತ್ತು ಮತ್ತು ಬೆನ್ನುಮೂಳೆಗೆ ಹರಡಿತ್ತು ಮತ್ತು ರೋಗವು ನಾಲ್ಕನೇ ಹಂತವನ್ನು ದಾಟಿತ್ತು.
ರಾಜಗಿರಿ ಆಸ್ಪತ್ರೆಯ ಹಿರಿಯ ವೈದ್ಯಕೀಯ ಆಂಕೊಲಾಜಿಸ್ಟ್ ಡಾ. ಅರುಣ್ ಫಿಲಿಪ್ ನೇತೃತ್ವದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತು. ರುಸಿಯಾ ಅವರಿಗೆ ಟಾರ್ಗೆಟೆಡ್ ಥೆರಪಿ ಎಂಬ ನವೀನ ಚಿಕಿತ್ಸಾ ವಿಧಾನವನ್ನು ನೀಡಲಾಯಿತು. ಹಿರಿಯ ಬೆನ್ನುಮೂಳೆ ಶಸ್ತ್ರಚಿಕಿತ್ಸಕ ಡಾ. ಅಮೀರ್ ಎಸ್. ಬೀವಿಯ ನೇತೃತ್ವದಲ್ಲಿ ಮೊದಲು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅದರ ನಂತರ ಉದ್ದೇಶಿತ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. ಒಂದು ತಿಂಗಳ ಚಿಕಿತ್ಸೆಯ ಕೊನೆಯಲ್ಲಿ, ಕ್ಯಾನ್ಸರ್ ಅನ್ನು ಪರಾಭವಗೊಳಿಸಿ ನಂತರ ರಸಿಯಾ ಮರಳಿದರು.
ಮೂವತ್ತೇಳನೇ ವಯಸ್ಸಿನಲ್ಲಿ ರಸಿಯಾಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ತನ್ನ ಹೋರಾಟದ ಮನೋಭಾವದಿಂದಾಗಿಯೇ ರಸಿಯಾ ತನ್ನ ಅನಾರೋಗ್ಯದ ನಡುವೆಯೂ ತನ್ನದೇ ಆದ ಒರಿಬ್ಯಾಗ್ಸ್ ಅನ್ನು ಯಶಸ್ಸಿನ ಹಾದಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಯಿತು. 32 ಮಹಿಳೆಯರು ಸೇರಿದಂತೆ 42 ಕಾರ್ಮಿಕರು ಇಂದು ಅವರ ಕಂಪನಿಯ ಭಾಗವಾಗಿದ್ದಾರೆ.
ಇಂದು, ಉಗಾಂಡಾದಲ್ಲಿ ಕ್ಯಾನ್ಸರ್ ವಿರುದ್ದ ರೋಗಿಗಳನ್ನು ಪ್ರೇರೇಪಿಸುವಲ್ಲಿ ರಸಿಯಾ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು, ಉಗಾಂಡಾದ ಯುವಕರಿಗೆ ಸ್ಪೂರ್ತಿದಾಯಕ ತರಗತಿಗಳು ಮತ್ತು ಪ್ರೇರಕ ಕಾರ್ಯಕ್ರಮಗಳೊಂದಿಗೆ ರಸಿಯಾ ಬಿಡುವಿಲ್ಲದ ಜೀವನವನ್ನು ನಡೆಸುತ್ತಿದ್ದಾರೆ. ಮಹಿಳೆಯರ ಉನ್ನತಿಗೆ ಉದ್ದೇಶಿಸಿರುವ ಹಲವು ಯೋಜನೆಗಳಲ್ಲಿ ರಸಿಯಾ ಸಕ್ರಿಯವಾಗಿದ್ದಾರೆ. ಇವರ ಈ ಎಲ್ಲ ಸಾಧನೆಗೆ ಉಗಾಂಡದ ವಜ್ರಮಹೋತ್ಸವದ ಅಂಗವಾಗಿ ಅಲ್ಲಿಯ ಅಧ್ಯಕ್ಷರಿಂದ ವಿಶೇಷ ಪ್ರಶಸ್ತಿ ಘೋಷಿಸಲಾಗಿದೆ.






