ಕಾಸರಗೋಡು: ಮುಸ್ಲಿಂ ಜನಾಂಗದ ಹತ್ಯಾಕಾಂಡಕ್ಕೆ ಕಾನೂನಾತ್ಮಕ ಮಾನ್ಯತೆ ನೀಡುವ ಜನಾಂಗೀಯ ಕಾಯಿದೆಯನ್ನು ಬಲವಾಗಿ ಪ್ರತಿಭಟಿಸಲಾಗುವುದು ಎಂದು ಫೆಟರ್ನಿಟಿ ಜಿಲ್ಲಾಧ್ಯಕ್ಷ ಸಿ.ಎ.ಯೂಸುಫ್ ಚೆಂಬರಿಕ ಹೇಳಿದರು.
ಸಿಎಎ ಜನಾಂಗೀಯ ಕಾಯ್ದೆ ವಿರೋಧಿಸಿ ಫ್ರಟರ್ನಿಟಿ ಮೂವ್‍ಮೆಂಟ್ ಸೆಂಟ್ರಲ್ ಯೂನಿವರ್ಸಿಟಿ ಆಫ್ ಕೇರಳ ಘಟಕದ ವತಿಯಿಂದ ಪೆರಿಯ ಕೇಂದ್ರೀಯ ವಿವಿ ಎದುರು ನಿನ್ನೆ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭಟನೆಯ ಭಾಗವಾಗಿ ಸಿಎಎ ಕಾಯ್ದೆಯನ್ನು ಸಾಂಕೇತಿಕವಾಗಿ ಸುಟ್ಟು ಹಾಕಲಾಯಿತು. ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಮುಖಂಡರಾದ ಶಾಲಿನಿ, ಫೆಟರ್ನಿಟಿ ಘಟಕದ ಅಧ್ಯಕ್ಷ ಹಾರೂನ್, ಕಾರ್ಯದರ್ಶಿ ಹಂಸ, ಜಿಲ್ಲಾ ಸಮಿತಿ ಸದಸ್ಯರಾದ ಸಿರಾಜುದ್ದೀನ್ ಮುಜಾಹಿದ್, ಶಹಬಾಜ್ ಕೋಲಿಯಾಟ್ ಮಾತನಾಡಿದರು. ಶಿಬಿನ್ ರೆಹಮಾನ್ ಸ್ವಾಗತಿಸಿ, ಹಾದಿ ವಂದಿಸಿದರು.




.jpg)
