ಕಾಸರಗೋಡು: ಲೋಕಸಭಾ ಚುನಾವಣೆಯ ಮತ ಎಣಿಕೆ ಕೇಂದ್ರ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಪೆರಿಯಾ ಕ್ಯಾಂಪಸ್‍ಗೆ ಜಿಲ್ಲಾಧಿಕಾರಿ ಕೆ.ಇನ್‍ಬಾಶೇಖರ್ ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಟದಿಕಾರಿ ಪಿ.ಬಿಜೋಯ್ ಗುರುವಾರ ಭೆಟಿ ನೀಡಿ ಜಂಟಿ ತಪಾಸಣೆ ನಡೆಸಿದರು. ಮತ ಚಲಾಯಿಸಿದ ವಿದ್ಯುನ್ಮಾನ ಮತಯಂತ್ರಗಳನ್ನು ದಾಸ್ತಾನಿರಿಸಿಕೊಳ್ಳುವ ಕೊಠಡಿ ವ್ಯವಸ್ಥೆಯನ್ನೂ ಪರಿಶೀಲಿಸಲಾಯಿತು. ವಿಶ್ವ ವಿದ್ಯಾಲಯ ಕ್ಯಾಂಪಸ್‍ನ ಸಬರಮತಿ, ಗಂಗೋತ್ರಿ, ಕಾವೇರಿ ಮತ್ತು ಬ್ರಹ್ಮಪುತ್ರ ಬ್ಲಾಕ್‍ಗಳನ್ನು ಪರಿಶೀಲಿಸಿ ಸೌಲಭ್ಯದ ಮೌಲ್ಯಮಾಪನ ಮಾಡಲಾಯಿತು.
ಕಾಸರಗೋಡು ಲೋಕಸಭಾ ಕ್ಷೇತ್ರದ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳಲ್ಲಿನ ಮತಯಂತ್ರಗಳನ್ನು ಕೇಂದ್ರೀಯ ವಿಶ್ವ ವಿದ್ಯಾಲಯದ ಭದ್ರತಾಕೋಶಗಳಲ್ಲಿ ಇರಿಸಲಾಗುವುದು. ಚುನಾವಣಾ ಸಾಮಗ್ರಿಗಳ ವಿತರಣೆ ಆಯಾ ವಿಧಾನಸಭಾ ಕ್ಷೇತ್ರಗಳ ಪ್ರಮುಖ ಕೇಂದ್ರಗಳಲ್ಲಿ ನಡೆಯಲಿದೆ. ಭದ್ರತಾ ಸಿಬ್ಬಂದಿ, ಚುನಾವಣಾ ಅಧಿಕಾರಿಗಳು ಮತ್ತು ಅಭ್ಯರ್ಥಿಗಳ ಏಜೆಂಟ್‍ಗಳು ಸೇರಿದಂತೆ 3000 ಕ್ಕೂ ಹೆಚ್ಚು ಜನರು ಒಟ್ಟುಸೇರಲಿದ್ದು, ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪೆರಿಯಾ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಮತ ಎಣಿಕೆ ಕೇಂದ್ರವಾಗಿ ಆಯ್ಕೆ ಮಾಡಲಾಗಿದೆ. ಈ ಸಂದರ್ಭ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿಜೋಯ್ ನೇತೃತ್ವದಲ್ಲಿ ಪೆÇಲೀಸರು ಭದ್ರತಾ ತಪಾಸಣೆಯನ್ನೂ ನಡೆಸಿದರು.
ಸಹಾಯಕ ಚುನಾವಣಾಧಿಕಾರಿಗಳು, ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಆರ್‍ಡಿಒ ಪಿ. ಬಿನುಮೋನ್, ಎಲ್‍ಎ ಡೆಪ್ಯೂಟಿ ಕಲೆಕ್ಟರ್ ನಿರ್ಮಲ್ ರೀಟಾ ಗೋಮ್ಸ್, ಎಲ್‍ಆರ್ ಡೆಪ್ಯೂಟಿ ಕಲೆಕ್ಟರ್ ಜೆಗ್ಗಿ ಪೌಲ್, ಆರ್‍ಆರ್ ಜಿಲ್ಲಾಧಿಕಾರಿ ಪಿ.ಶಾಜು, ಸಹಾಯಕ ಜಿಲ್ಲಾಧಿಕಾರಿ(ಚುನಾವಣೆ) ಪಿ ಅಖಿಲ್, ಸಂಬಂಧಪಟ್ಟ ನೋಡಲ್ ಅಧಿಕಾರಿಗಳು, ಎಲೆಕ್ಟ್ರಿಕಲ್ ರಿಜಿಸ್ಟರ್ ಅಧಿಕಾರಿಗಳು ಮುಂತಾದವರು ಜೊತೆಗಿದ್ದರು.





