ಕಾಸರಗೋಡು: ಪಿಎಂ ಸೂರಜ್ ರಾಷ್ಟ್ರೀಯ ಪೆÇೀರ್ಟಲನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆನ್‍ಲೈನ್ ಮೂಲಕ ಉದ್ಘಾಟಿಸಿದರು. ಆನ್‍ಲೈನ್ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳ ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ ನಡೆಸಿದರು.
ಸಾಮಾಜಿಕ ಉನ್ನತಿ ಮತ್ತು ವೃತ್ತಿಪರ ಸಾರ್ವಜನಿಕ ಕಲ್ಯಾಣ ಉದ್ದೇಶದಿಂದ ಆರಂಭಿಸಲಾಗಿರುವ ಪೆÇೀರ್ಟಲ್ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾಧಿಕಾರಿ ಕೆ.ಇನ್‍ಬಾಶೇಖರ್, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ.ರಾಜ್, ಹಿಂದುಳಿದ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಎನ್.ಎಂ.ಮೋಹನನ್, ಎಸ್‍ಸಿ ಮತ್ತು ಎಸ್‍ಟಿಗೆ ಕೆಎಸ್‍ಡಿಸಿ ಜಿಲ್ಲಾ ಪ್ರಭಾರ ವ್ಯವಸ್ಥಾಪಕ ಮೊಹಮ್ಮದ್ ಶಫಿ, ಲೀಡ್ ಬ್ಯಾಂಕ್ ಅಧಿಕಾರಿ ಪಿ.ಹರೀಶ್, ಕೇರಳ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಅಧಿಕಾರಿ ವಿ.ಎಂ.ಪ್ರಭಾಕರನ್, ವಿವಿಧ ಯೋಜನೆಗಳ ಫಲಾನುಭವಿಗಳು ಭಾಗವಹಿಸಿದ್ದರು. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎನ್.ಎಂ.ಮೋಹನನ್ ಅವರು ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ಪರಿಚಯಿಸಿದರು.
ಎನ್‍ಬಿಸಿಎಫ್‍ಡಿಸಿ ಮೈಕ್ರೋ ಕ್ರೆಡಿಟ್, ಎನ್‍ಎಂಡಿಎಫ್‍ಸಿ ಮಹಿಳಾ ಸಮೃದ್ಧಿ ಯೋಜನೆ, ಎನ್‍ಎಸ್‍ಕೆಎಫ್‍ಡಿಸಿ ಮಹಿಳಾ ಸಮೃದ್ಧಿ ಯೋಜನೆಗಳ ಫಲಾನುಭವಿಗಳಾಗಿರುವ ಸಿಡಿಎಸ್‍ಗಳಿಗೆ ಸವಲತ್ತುಗಳನ್ನು ನೀಡುವ ಆದೇಶವನ್ನು ಜಿಲ್ಲಾಧಿಕಾರಿ ಹಸ್ತಾಂತರಿಸಿದರು. ಆದೇಶ ಪಡೆದುಕೊಂಡಿರುವವುಗಳಲ್ಲಿ ಮೀಂಜ, ಚೆಮ್ನಾಡು, ಪೈವಳಿಗೆ ಹಾಗೂ ದೇಲಂಬಾಡಿ ಪಂಚಾಯಿತಿ ಸಿಡಿಎಸ್‍ಗಳು ಒಳಗೊಂಡಿದೆ.





