ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕುತ್ತಿಕ್ಕೋಲ್ ಬಳಿ ಸಹೋದರರ ಮಧ್ಯೆ ನಡೆದ ಜಗಳದಲ್ಲಿ ತಮ್ಮನನ್ನು ಗುಂಡಿಕ್ಕಿ ಕೊಲೆಗೈಯಲಾಗಿದೆ. ಕುತ್ತಿಕ್ಕೋಲಿನ ನೂಞಂಗಾನ ನಿವಾಸಿ ಅಶೋಕನ್ ನಾಯರ್(45)ಕೊಲೆಯಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿ ಇವರ ಸಹೋದರ ಬಾಲಕೃಷ್ಣನ್ ನಾಯರ್(50)ಎಂಬಾತನನ್ನು ಬೇಡಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ತಡರಾತ್ರಿ ಕುಡಿತದ ನಶೆಯಲ್ಲಿ ಸಹೋದರರ ಮಧ್ಯೆ ಜಗಳ ಆರಂಭಗೊಂಡಿದ್ದು, ಹೊಡೆದಾಟವೂ ನಡೆದಿತ್ತು. ಈ ಸಂದರ್ಭ ಅಶೋಕನ್ ನಾಯರ್ ಅವರು ಸಹೋದರ ಬಾಲಕೃಷ್ಣನ್ ನಾಯರ್ ಅವರ ಕಾಲಿಗೆ ಕಲ್ಲು ಎತ್ತಿಹಾಕಿದ್ದರು. ಇದರಿಂದ ಕುಪಿತನಾದ ಬಾಲಕೃಷ್ಣನ್ ನಾಯರ್ ಸನಿಹದ ಮಾಧವನ್ ನಾಯರ್ ಎಂಬವರ ಮನೆಗೆ ತೆರಳಿ, ಅವರ ಬೇಟೆಯಾಡುವ ಕೋವಿ ತಂದು ಅಶೋಕನ್‍ಗೆ ಗುಂಡಿಕ್ಕಿದ್ದಾರೆ. ತೊಡೆ ಭಾಗಕ್ಕೆ ಗುಂಡೇಟು ತಗುಲಿ ಗಂಭೀರಾವಸ್ಥೆಯಲ್ಲಿದ್ದ ಅಶೋಕನ್ ಅವರನ್ನು ಕಾಸರಗೋಡಿನ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.
ಕಾಲಿಗೆ ಕಲ್ಲು ಬಿದ್ದು ಗಾಯಗೊಂಡಿರುವ ಆರೋಪಿ ಬಾಲಕೃಷ್ಣನ್ ನಾಯರ್‍ಗೆ ಪೊಲೀಸ್ ಕಾವಲಿನೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಮಡು ತನಿಖೆ ನಡೆಸುತ್ತಿದ್ದಾರೆ.





