ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ.ಯು.ಪಿ.ಶಾಲೆಯಲ್ಲಿ 2023-24ನೇ ಸಾಲಿನ ಕಲಿಕೋತ್ಸವ ಕಾರ್ಯಕ್ರಮ ದಿ.ಯಂ.ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪಿಟಿಎ ಅಧ್ಯಕ್ಷÀ ಹಮೀದ್ ಮೈತಾಲ್ ವಹಿಸಿದ್ದರು. ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್.ಎಂ, ಮಂಜೇಶ್ವರ ಬಿ.ಆರ್.ಸಿ ಸಂಯೋಜಕ ಮೋಹಿನಿ ಟೀಚರ್ ಹಾಗೂ ಶಾಲಾ ಪ್ರಧಾನ ಅಧ್ಯಾಪಕ ಅರವಿಂದಾಕ್ಷ ಭಂಡಾರಿ ಶುಭ ಹಾರೈಸಿದರು. ಶಾಲಾ ಎಂ.ಪಿಟಿಎ ಅಧಕ್ಷೆ ಸ್ವಪ್ನ.ಪಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಲ್.ಕೆ.ಜಿ ತರಗತಿ ವಿದ್ಯಾರ್ಥಿಗಳ ‘ಚಿಗುರು’ಪುಸ್ತಕ ಹಾಗೂ 4ನೇ ತರಗತಿಯ ವಿದ್ಯಾರ್ಥಿಗಳ ‘ಕಿರುನೋಟ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ನಂತರ ನಮ್ಮ ಶಾಲೆಯಿಂದ ಇನ್ನ್ನೋವೇಟಿವ್ ಕಾರ್ಯಕ್ರಮಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಶಾರ್ವಿ. ಆರ್ ತನ್ನ ಮಾದರಿಯ ಬಗ್ಗೆ ತಿಳಿಸಿದಳು. ಅಧ್ಯಾಪಕ ಮಹಾಬಲೇಶ್ವರ ಭಟ್ ಇನೋವೆಟಿವ್ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿ ಸ್ನೇಹಿನ್ ಕುಮಾರ್ ಸ್ವಾಗತಿಸಿ, ವಿದ್ಯಾರ್ಥಿ ಅಭಿರಾಮ ಭಟ್ ವಂದಿಸಿದನು. ಶಾಲಾ ವಿದ್ಯಾರ್ಥಿ ಕೌಶಿಕ್ ಕಾರ್ಯಕ್ರಮವನ್ನು ನಿರೂಪಿಸಿದನು. ನಂತರ ವಿದ್ಯಾರ್ಥಿಗಳು ಕವನ ವಾಚನ,ಪ್ರಯೋಗ, ಸಂಭಾಷಣೆ ಮುಂತಾದ ಪಾಠಕ್ಕೆ ಸಂಬಂಧಿಸಿದ ವಿಷಯಗಳನ್ನು ಹೆತ್ತವರ ಮುಂದೆ ಪ್ರದರ್ಶಿದರು.




.jpg)
