ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಆದೂರಿನಲ್ಲಿ ಕಾಡುಹಂದಿ ತಿವಿದ ಪರಿಣಾಮ ಬಿದ್ದು ಮಹಿಳೆ ಗಾಯಗೊಮಡಿದ್ದಾರೆ. ಇವರ ನಾಲ್ಕು ಹಲ್ಲುಗಳು ಉದುರಿದೆ. ಬೆಳ್ಳೂರಡ್ಕ ನಿವಾಸಿ ಮಾಲತಿ ಗಾಯಾಳು. ಇವರು ಬಸ್ಸಿಗೆ ಕಾದುನಿಂತಿದ್ದ ಸಂದರ್ಭ ಏಕಾಏಕಿ ಧಾವಿಸಿ ಬಂದ ಕಾಡುಹಂದಿ ಇವರಿಗೆ ತಿವಿದಿದೆ. ಈ ಸಂದರ್ಭ ಬಿದ್ದಿದ್ದರು. ಗಾಯಾಳುವನ್ನು ತಕ್ಷಣ ಚೆಂಗಳದ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.




