ಕಾಸರಗೋಡು: ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ, ಪರಪ್ಪ ಪರಿಶಿಷ್ಠ ಅಭಿವೃದ್ಧಿ ಕಛೇರಿಯು ದಿನಗೂಲಿ ಆಧಾರದ ಮೇಲೆ ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕ್ಲರ್ಕ್ ಯಾ ವಾರ್ಡನ್ (ಅರ್ಹತೆ ಎಸ್ ಎಸ್ ಎಲ್ ಸಿ, ಕಂಪ್ಯೂಟರ್ ಜ್ಞಾನ, ಇಂಗ್ಲಿಷ್ ಅತವಾ ಮಲಯಾಳಂ ಡೇಟಾ ಎಂಟ್ರಿ , ಕೆಲಸದ ಅನುಭವವಿರುವ ಎಸ್ ಟಿ ವಿಭಾಗದ ಅಭ್ಯರ್ಥಿಗಳಿಗೆ ಆದ್ಯತೆ),, ಆಫೀಸ್ ಅಟೆಂಡೆಂಟ್ (ಅರ್ಹತೆ ಎಸ್ ಟಿ ವಿಭಾಗ, ಪಿ ಎಸ್ ಸಿ ಯಿಂದ ಸೂಚಿಸಲಾದ ಅರ್ಹತೆಗಳು), ಆಯಾ (ಅರ್ಹತೆ ಎಸ್ ಟಿ ವಿಭಾಗ, ಪಿ ಎಸ್ ಸಿ ಯಿಂದ ಸೂಚಿಸಲಾದ ವಿದ್ಯಾರ್ಹತೆಗಳು ), ಅಡುಗೆಯವರು (ಅರ್ಹತೆ ಎಸ್‍ಟಿ ವಿಭಾಗ, ಪಿಎಸ್‍ಸಿ ಸೂಚಿಸಿದ ಅರ್ಹತೆಗಳು, ಫುಡ್ ಕ್ರಾಫ್ಟ್ ಇನ್‍ಸ್ಟಿಟ್ಯೂಟ್‍ನಿಂದ ಪ್ರಮಾಣಪತ್ರ ಹೊಂದಿರುವವರಿಗೆ ಆದ್ಯತೆ), ವಾಚ್‍ಮ್ಯಾನ್ ಯಾ ಸೆಕ್ಯುರಿಟಿ (ಅರ್ಹತೆ ಎಸ್‍ಟಿ ವಿಭಾಗ, ಪಿಎಸ್‍ಸಿ ಸೂಚಿಸಿದ ಅರ್ಹತೆಗಳು).
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 15 ಸಂಜೆ 5:00 ಗಂಟೆಯ ವರೆಗೆ. ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.
ಪರಿಶಿಷ್ಟ ಅಭಿವೃದ್ಧಿ ಅಧಿಕಾರಿ ಪರಿಶಿಷ್ಟ ಅಭಿವೃದ್ಧಿ ಕಛೇರಿ ಪರಪ್ಪ ಫೆಡರಲ್ ಬ್ಯಾಂಕ್ ಕಟ್ಟಡ, 2 ನೇ ಮಹಡಿ, ಪರಪ್ಪ ಅಂಚೆ-671533. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0467 2960111)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




