ದುಬೈ: ಅಬುಧಾಬಿಯ ಲುಲು ಹೈಪರ್‍ಮಾರ್ಕೆಟ್‍ನಿಂದ ಸುಮಾರು ಒಂದೂವರೆ ಕೋಟಿ ರೂಪಾಯಿ ಕಳ್ಳತನ ಮಾಡಿದ ಕಣ್ಣೂರಿನ ಯುವಕನಿಗಾಗಿ ಪೋಲೀಸರು ಬಲೆ ಬೀಸಿದ್ದಾರೆ.
ಲುಲು ಗ್ರೂಪ್ ಅಬುಧಾಬಿ ಪೋಲೀಸರಿಗೆ ದೂರು ನೀಡಿದ್ದು, ಕಣ್ಣೂರು ನಾರತ್ ಸುಹರಾ ಮನ್ಸಿಲ್, ಪೆÇಯ್ಯಕಲ್ ಪುದಿಯ ಪುರದ ಮುಹಮ್ಮದ್ ನಿಯಾಜಿ (38) ವಿರುದ್ಧ ಅಬುಧಾಬಿ ಪೋಲೀಸರಿಗೆ ದೂರು ನೀಡಲಾಗಿದೆ. ಈತ ಖಾಲಿದಿಯಾ ಮಾಲ್‍ನಲ್ಲಿರುವ ಲುಲು ಹೈಪರ್‍ಮಾರ್ಕೆಟ್‍ನ ಕ್ಯಾಶ್ ಆಫೀಸ್ ಇನ್‍ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದ.
ಮಾರ್ಚ್ 25 ರಂದು ಮಧ್ಯಾಹ್ನ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ನಿಯಾಸ್ ಗೈರುಹಾಜರಾಗಿರುವುದನ್ನು ಗಮನಿಸಿದ ಹೈಪರ್ಮಾರ್ಕೆಟ್ ಅಧಿಕಾರಿಗಳು ತನಿಖೆ ಆರಂಭಿಸಿದರು. ಮೊಬೈಲ್ ಸಂಪರ್ಕಿಸಲು ಪ್ರಯತ್ನಿಸಿದರೂ ಸ್ವಿಚ್ ಆಫ್ ಆಗಿತ್ತು. ಪರಿಶೀಲನೆಯ ನಂತರ ಕಚೇರಿಯಿಂದ 6 ಲಕ್ಷ ದಿರ್ಹಮ್ ನಗದು ಕೊರತೆ ಕಂಡುಬಂದಿತು.
ನಿಯಾಸ್‍ನ ಪಾಸ್‍ಪೋರ್ಟ್ ಅನ್ನು ಕಂಪನಿಯು ಕಾನೂನುಬದ್ಧವಾಗಿ ಇರಿಸಿತ್ತು. ಅವನು ನಗದು ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕಾರಣ ಪಾಸ್ ಪೋರ್ಟ್ ಕೈವಶವಿರಿಸುವುದು ಕ್ರಮ. ಇದರಿಂದ ನಿಯಾಸ್ ಸಾಮಾನ್ಯವಾಗಿ ಯುಎಇ ತೊರೆಯಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಯಾಸ್ ಕಳೆದ 15 ವರ್ಷಗಳಿಂದ ಲುಲು ಗ್ರೂಪ್‍ನೊಂದಿಗೆ ಕೆಲಸ ಮಾಡುತ್ತಿದ್ದಾನೆÉ.
ಅಬುಧಾಬಿಯಲ್ಲಿ ನೆಲೆಸಿದ್ದ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಆತನನ್ನು ಹಿಂಬಾಲಿಸಿದ್ದಾರೆ. ಅವರ ಪತ್ನಿ ಎರ್ನಾಕುಳಂ ವೆನ್ನಾಲ ಚಳಿಕಾವಟ್ಟಂ ಮೂಲದವರು. ಪತ್ನಿ, ಮಕ್ಕಳು ಯಾರಿಗೂ ತಿಳಿಸದೆ ಏಕಾಏಕಿ ಊರಿಗೆ ತೆರಳಿದ್ದಾರೆ ಎನ್ನಲಾಗಿದೆ. ಲುಲು ಗ್ರೂಪ್‍ನ ದೂರಿನ ಮೇರೆಗೆ ಕೇರಳ ಪೋಲೀಸರು ತನಿಖೆ ಆರಂಭಿಸಿದ್ದಾರೆ.





