HEALTH TIPS

ಬಿಜೆಪಿ ರಾಜ್ಯ ಕಚೇರಿ ಮೇಲೆ ದಾಳಿ: ಆಮ್ ಆದ್ಮಿ ಪಕ್ಷದಿಂದ ಷಡ್ಯಂತ್ರ: ಆರೋಪ

                ತಿರುವನಂತಪುರಂ: ಮದ್ಯ ನೀತಿಯ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಜ್ರಿವಾಲ್ ಬಂಧನವನ್ನು ವಿರೋಧಿಸಿ ಆಮ್ ಆದ್ಮಿ ಕಾರ್ಯಕರ್ತರು ತಿರುವನಂತಪುರ ಬಿಜೆಪಿ ಕೇಂದ್ರ ಕಚೇರಿಗೆ ಮೆರವಣಿಗೆ ನಡೆಸಿ ಘರ್ಷಣೆಗೆ ಯತ್ನಿಸಿದ ಘಟನೆ ನಡೆದಿದೆ. 

                ಎಎಪಿ ಸದಸ್ಯರು ಪ್ರತಿಭಟನೆ ನಡೆಸಿ ಬಿಜೆಪಿ ಕಚೇರಿಗೆ ನುಗ್ಗಲು ಯತ್ನಿಸಿದರು. ಮೆರವಣಿಗೆಯಲ್ಲಿ ಸ್ಫೋಟಕಗಳನ್ನು ಎಸೆದು ಭಯೋತ್ಪಾದನೆಯ ವಾತಾವರಣ ನಿರ್ಮಾಣವಾಯಿತು.

                   ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಮಾರ್ಚ್ ತಿಂಗಳಿನಲ್ಲಿ ಎಲ್ಲ ನಿಯಮಗಳನ್ನು ಮೀರಲಾಗಿದೆ. ಪೋಲೀಸರು ಆಗಮಿಸಿ, ಕಾನೂನು ಉಲ್ಲಂಘಿಸಿ ರಾಷ್ಟ್ರಧ್ವಜ ಬಳಸಿ ಪ್ರತಿಭಟನೆ-ದಾಂಧಲೆ ನಿರ್ಮಿಸುತ್ತಿದ್ದ ಎಎಪಿ ಕಾರ್ಯಕರ್ತರು ಧ್ವಜಕ್ಕೆ ಕಟ್ಟಿದ್ದ ಕೋಲುಗಳನ್ನು ಬಳಸಿ ಪೋಲೀಸರ ಮೇಲೆರಗಿದರು. ಪೋಲೀಸರು ರಾಷ್ಟ್ರಧ್ವಜವನ್ನು ವಶಪಡಿಸಿಕೊಳ್ಳಲು ಯತ್ನಿಸಿದಾಗ, ಧ್ವಜವನ್ನು ಎಸೆಯಲಾಯಿತು. ಎಎಪಿ ಸದಸ್ಯರು ರಸ್ತೆಯಲ್ಲಿದ್ದ ಧ್ವಜವನ್ನು ತುಳಿದು ಘರ್ಷನೆ ಬಿಗುಗೊಳಿಸಿದರು.

                 ಎಎಪಿ ಸದಸ್ಯರನ್ನು ಬಂಧಿಸಲು ಯತ್ನಿಸದ ಪೆÇಲೀಸರು ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದರು ಎಂದೂ ದೂರಲಾಗಿದೆ. ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಈವೇಳೆ ಗಾಯಗಳಾಗಿವೆ. ಮೆರವಣಿಗೆಯಲ್ಲಿ ಭಯೋತ್ಪಾದಕರ ಉಪಸ್ಥಿತಿ ಗೊತ್ತಿದ್ದರೂ ಪೋಲೀಸರು ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ. ಪ್ರತಿಭಟನಾಕಾರರನ್ನು ಬ್ಯಾರಿಕೇಡ್‍ನಲ್ಲಿ ನಿಯಂತ್ರಿಸಲು ಪೋಲೀಸರು ವಿಫಲರಾದರು. ಬಿಜೆಪಿ ಕಚೇರಿ ಮೇಲೆ ಪ್ರತಿಭಟನಾಕಾರರು ಹಿಂಸಾಚಾರ ನಡೆಸಿದಾಗ ಪೆÇಲೀಸರು ತಡೆಯಲು ಯತ್ನಿಸಿದರು.

                ಪಾದಯಾತ್ರೆಗೂ ಮುನ್ನ ಚಿತ್ತಿರ ತಿರುನ್ನಾಳ್ ಉದ್ಯಾನವನದಲ್ಲಿ ನಡೆದ ಸಭೆಯಲ್ಲಿ  ಎಡ, ಬಲ ಹಾಗೂ ಇತರೆ ಪಕ್ಷಗಳ ಜನರು ಪಾಲ್ಗೊಂಡಿದ್ದರು. ಇದಾದ ಬಳಿಕ ಮೆರವಣಿಗೆ ನಡೆಯಿತು. ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಬಿಜೆಪಿ ಕಚೇರಿ ಮೇಲೆ ದಾಳಿ ಮಾಡುವ ಉದ್ದೇಶದಿಂದ ಬಂದಿದ್ದರು. ಎಎಪಿ ರಾಜ್ಯಾಧ್ಯಕ್ಷ ವಿನೋದ್ ಮ್ಯಾಥ್ಯೂ ವಿಲ್ಸನ್, ಜಿಲ್ಲಾ ಕಾರ್ಯದರ್ಶಿ ಶಾಜು ಕರ್ತಾರ, ನವೀನ್ ಜಿ. ನಾದಮಣಿ, ಸಾಜುಮೋಹನ್, ಡಾ. ಬೆನ್ನಿ ಕಾಕಾಡು, ಡಾ. ಸೆಲಿನ್ ಫಿಲಿಪ್ ಮತ್ತು ಬೀನಾ ಕುರಿಯನ್ ಅವರ ನೇತೃತ್ವದಲ್ಲಿ ಮೆರವಣಿಗೆ ಮತ್ತು ಹಿಂಸಾಚಾರ ನಡೆಸಲಾಯಿತು.

ಎಲ್ ಡಿಎಫ್ ಷಡ್ಯಂತ್ರ: ಪಿ.ಕೆ. ಕೃಷ್ಣದಾಸ್:

                        ತಿರುವನಂತಪುರ: ಬಿಜೆಪಿ ರಾಜ್ಯ ಕಚೇರಿ ಹಾಗೂ ಎನ್‍ಡಿಎ ಚುನಾವಣಾ ಸಮಿತಿ ಕಚೇರಿ ಇರುವ ಮರಾರ್ಜಿ ಮಂದಿರಕ್ಕೆ ಎಎಪಿ ಬ್ಯಾನರ್‍ನಡಿ ನಡೆದ ಮೆರವಣಿಗೆ ಎಲ್‍ಡಿಎಫ್ ಮತ್ತು ಯುಡಿಎಫ್ ಪಿತೂರಿ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಟೀಕಿಸಿದ್ದಾರೆ. ಇದು ಚುನಾವಣಾ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕೃಷ್ಣದಾಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಚುನಾವಣೆ ಹೊಸ್ತಿಲಲ್ಲಿರುವ ಕಾರಣ ಗಲಭೆ ಮಾಡುವ ಉದ್ದೇಶದಿಂದ ಎಎಪಿ ಬಿಜೆಪಿ ಕಚೇರಿಯತ್ತ ಮೆರವಣಿಗೆ ನಡೆಸಿತು.

                     ಚುನಾವಣಾ ನೀತಿ ಸಂಹಿತೆ ಜಾರಿಯಾದರೆ 48 ಗಂಟೆ ಮುಂಚಿತವಾಗಿ ಚುನಾವಣಾ ಆಯೋಗ ಹಾಗೂ ಪೋಲೀಸರ ಅನುಮತಿ ಪಡೆಯಬೇಕು.

                         ಮೆರವಣಿಗೆ ನಡೆಸಲು ಪೋಲೀಸರು ಅನುಮತಿ ನೀಡಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಮೇಲಾಗಿ ಮೆರವಣಿಗೆಯಲ್ಲಿ ಭಾಗವಹಿಸಲು ಬಂದವರು ಸ್ಫೋಟಕಗಳೊಂದಿಗೆ ಬಂದಿದ್ದರು. ಅದನ್ನು ಪೋಲೀಸರ ಮುಂದೆ ಸಾರ್ವಜನಿಕವಾಗಿ ಬಳಸಲಾಯಿತು. ಚಿತ್ತರ  ತಿರುನಾಳ್ ಪಾರ್ಕ್ ನಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ಕಮ್ಯುನಿಸ್ಟ್ ಪಿಎಫ್ ಐ ಕ್ರಿಮಿನಲ್ ಗಳು ಭಾಗವಹಿಸಿದ್ದರು. ‘ಇಂಡಿಯಾ’ ಒಕ್ಕೂಟದ ನೇತೃತ್ವದಲ್ಲಿ ಚಿತ್ತಿರ ತಿರುನಾಳ್ ಉದ್ಯಾನವನದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಈ ಸಭೆಯಲ್ಲಿ ಎಲ್‍ಡಿಎಫ್ ಮತ್ತು ಯುಡಿಎಫ್ ಅಭ್ಯರ್ಥಿಗಳಾದ ಪನ್ಯನ್ ರವೀಂದ್ರನ್ ಮತ್ತು ಶಶಿ ತರೂರ್ ಭಾಗವಹಿಸಿದ್ದರು. ಇದರ ಮುಂದುವರಿದ ಭಾಗವಾಗಿ ಎಎಪಿ ಪಾದಯಾತ್ರೆ ನಡೆಸಿತು. 

                        ಯಾವುದೇ ಕಾನೂನು ಅನುಮತಿ ಇದ್ದಿರಲಿಲ್ಲ, ಆದರೆ ಪೋಲೀಸರ ಮೌನ ಅನುಮೋದನೆ ಇದರ ಹಿಂದೆ ಇದೆ. ಸರ್ಕಾರದ ಅರಿವಿನ ಮೇರೆಗೆ ಈ ಪ್ರತಿಭಟನಾ ಮೆರವಣಿಗೆ ನಡೆದಿದೆ. ಸ್ಫೋಟದ ಸದ್ದು ಕೇಳಿ ದೌಡಾಯಿಸಿ ಬಂದ ಬಿಜೆಪಿ ಕಾರ್ಯಕರ್ತರನ್ನು ಪೋಲೀಸರು ಯಾವುದೇ ಪ್ರಚೋದನೆ ಇಲ್ಲದೆ ಥಳಿಸಿದ್ದಾರೆ. ಇದರ ಹಿಂದೆ ಬಿಜೆಪಿ ಕಾರ್ಯಕರ್ತರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಎನ್‍ಡಿಎ ಪ್ರಗತಿಯನ್ನು ತಡೆಯುವ ರಹಸ್ಯ ಪ್ರಯತ್ನವಿದೆ.

                   ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಬೇಡಿಕೆಯಿದ್ದರೆ  ಕೇಂದ್ರ ಸರ್ಕಾರದ ಕಚೇರಿವರೆಗೆ ಮೆರವಣಿಗೆ ನಡೆಸಬೇಕು. ಮತ್ತು ಕೇಂದ್ರದಲ್ಲಿರುವ ಆಡಳಿತ ಪಕ್ಷದ ಕಚೇರಿಗೆ ಅಲ್ಲ. ರಾಜ್ಯ ಸರ್ಕಾರದ ವಿರುದ್ಧ ಸೆಕ್ರೆಟರಿಯೇಟ್‍ಗೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ ಮೆರವಣಿಗೆ ಎಕೆಜಿ ಸೆಂಟರ್‍ಗೆ ಯಾರೂ ನಡೆಸುವ ಕ್ರಮವಿಲ್ಲ. ಇದು ರಾಜಕೀಯ ಪಕ್ಷ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣ ಎಂದು ಕೃಷ್ಣದಾಸ್ ತಿಳಿಸಿರುವರು. ಮಾಕ್ರ್ಸ್‍ವಾದಿ ಪಕ್ಷ, ಕಾಂಗ್ರೆಸ್ ಮತ್ತು ಭಯೋತ್ಪಾದಕ ಸಂಘಟನೆಗಳ ಬಂಡಾಯ ಪ್ರಯತ್ನ ಆಕ್ಷೇಪಾರ್ಹ ಎಂದು ಹೇಳಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries