ಕಾಸರಗೋಡು: ಮುಂದಿನ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳು ಬೇಸಿಗೆಯ ವಿರಾಮದ ಮೊದಲು ಬಂದಿವೆ. 5,64,605 ಪುಸ್ತಕಗಳು ಕಾಸರಗೋಡು ಸರ್ಕಾರಿ ಪ್ರೌಢಶಾಲೆ ಜಿಲ್ಲಾ ಕೇಂದ್ರವನ್ನು ತಲುಪಿವೆ. 2, 4, 6, 8 ಮತ್ತು 10ನೇ ತರಗತಿಯ ಮಲಯಾಳಂ, ಇಂಗ್ಲಿಷ್, ಮತ್ತು ಕನ್ನಡ # ಮಾಧ್ಯಮಗಳ ಪುಸ್ತಕಗಳು ಬಂದಿವೆ. ಕೆಲವು ತರಗತಿಗಳ ಪುಸ್ತಕಗಳಲ್ಲಿ ಬದಲಾವಣೆಗಳಿವೆ. ಬದಲಾಗುವ ಪುಸ್ತಕಗಳು ಮೇ ತಿಂಗಳಲ್ಲಿ ಬರುತ್ತವೆ.
5 ವರ್ಷಗಳಿಂದ ಪಠ್ಯಪುಸ್ತಕ ವಿತರಣೆಯ ಉಸ್ತುವಾರಿಯನ್ನು ಕುಟುಂಬಶ್ರೀ ವಹಿಸಿಕೊಂಡಿದೆ. ಮೊದಲ ಭಾಗವಾಗಿ 137 ಸೊಸೈಟಿಗಳಲ್ಲಿ 15,79,410 ಪುಸ್ತಕಗಳನ್ನು ವಿತರಿಸಲಾಗಿದೆ. ಇಲ್ಲಿಯವರೆಗೆ 5,64,605 ಪುಸ್ತಕಗಳು ಡಿಪೆÇೀ ತಲುಪಿವೆ. ಅದರಲ್ಲಿ ಕುಂಬಳೆ ಎಇಒ ಸೊಸೈಟಿಗಳಲ್ಲಿ 8763, ಮಂಜೇಶ್ವರ ಸೊಸೈಟಿಗಳಲ್ಲಿ 57,250, ಹೊಸದುರ್ಗ ಸೊಸೈಟಿಗಳಲ್ಲಿ 35,320 ಸೇರಿ ಒಟ್ಟು 1,01,333 ಪುಸ್ತಕಗಳನ್ನು ವಿತರಿಸಲಾಗಿದೆ. ಒಂದು ಸೊಸೈಟಿಯು ತನ್ನ ವ್ಯಾಪ್ತಿಯಲ್ಲಿ 5 ಶಾಲೆಗಳನ್ನು ಹೊಂದಿದೆ.
ಜಿಲ್ಲಾ ಮಟ್ಟದಲ್ಲಿ ಪಠ್ಯಪುಸ್ತಕಗಳ ವಿತರಣೆ ಉದ್ಘಾಟನೆ:
ಕಾಸರಗೋಡು ಜಿಲ್ಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ (2,02,425) ಪಠ್ಯಪುಸ್ತಕಗಳ ವಿತರಣೆ ಆರಂಭವಾಗಿದೆ. ಕಾಸರಗೋಡು ಜಿಎಚ್‍ಎಸ್‍ಎಸ್ ಶಾಲೆಯಲ್ಲಿ ಪಠ್ಯಪುಸ್ತಕ ವಿತರಣೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ನೆರವೇರಿಸಿದರು. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ನಂದಿಕೇಶನ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಎಚ್‍ಎಸ್‍ಎಸ್ ಶಾಲೆಯ ಮುಖ್ಯೋಪಾಧ್ಯಾಯಿನಿ ಉಷಾ ಪುಸ್ತಕಗಳನ್ನು ಸ್ವೀಕರಿಸಿದರು. ಡಯಟ್ ಪ್ರಾಂಶುಪಾಲ ಡಾ.ರಘುರಾಮ ಭಟ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸದಸ್ಯ ಇ.ಶಿಬಿ, ಡಿಪಿಸಿಎಸ್‍ಎಸ್ ಕೆ.ಬಿಜುರಾಜ್, ಡಿಡಿಇಎ ಬಿ.ಸುರೇಂದ್ರನ್, ವಿದ್ಯಾಕಿರಣ ಡಿಸಿ ಸುನೀಲ್ ಕುಮಾರ್, ಆಗಸ್ಟಿನ್ ಬರ್ನಾಡ್, ವಲ್ಸರಾಜ್, ಬಾಬುರಾಜ್, ಡಿಡಿಇ ಕ್ಲರ್ಕ್ ಬಶೀರ್, ಡಿಪೋ ಮೇಲ್ವಿಚಾರಕಿ ಅರ್ಷನಾ ಮಾತನಾಡಿದರು. ಡಿಇಒ ವಿ.ದಿನೇಶ್ ಸ್ವಾಗತಿಸಿದರು.







