ಕುಂಬಳೆ: ‘ಯಾರೂ ಏಕಾಂಗಿಯಲ್ಲ, ಜೊತೆಯಾಗಿ ಖುಷಿಯಿಂದ ಉಪವಾಸ ಆಚರಿಸೋಣ’ ಎಂಬ ಸಂದೇಶದೊಂದಿಗೆ ಪೀಪಲ್ಸ್ ಫೌಂಡೇಶನ್ ವತಿಯಿಂದ ರಂಜಾನ್ ಕಿಟ್ ವಿತರಣೆ ಜಿಲ್ಲಾ ಮಟ್ಟದ ಉದ್ಘಾಟನೆ ಮೊಗ್ರಾಲ್ ಕೊಪ್ಪಳದಲ್ಲಿ ನಡೆಯಿತು. ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಜಮಾಅತೆ ಇಸ್ಲಾಮಿ ಜಿಲ್ಲಾ ಉಪಾಧ್ಯಕ್ಷ ಕೆ.ಐ.ಅಬ್ದುಲತೀಫ್ ಅಧ್ಯಕ್ಷತೆ ವಹಿಸಿದ್ದರು. ಜಮಾಅತೆ ಇಸ್ಲಾಮಿ ಜಿಲ್ಲಾ ಕಾರ್ಯದರ್ಶಿ ಪಿ.ಎಸ್.ಅಬ್ದುಲ್ಲಾ ಕುಂಞÂ್ಞ, ಜಮಾಅತೆ ಇಸ್ಲಾಮಿ ವಲಯ ಅಧ್ಯಕ್ಷ ಬಿ.ಎಂ.ಅಬ್ದುಲ್ಲ, ಸಾಲಿಡಾರಿಟಿ ಜಿಲ್ಲಾಧ್ಯಕ್ಷ ಅದ್ನಾನ್, ವೆಲ್ಫೇರ್ ಪಾರ್ಟಿ ಜಿಲ್ಲಾ ಸಮಿತಿ ಸದಸ್ಯ ಸಿ.ಎಚ್.ಮುತ್ತಲಿಬ್, ಅಬ್ದುಲ್ಲತೀಫ್ ಕುಂಬಳೆ, ಬಿರಾನ್ ಮೊಯ್ತೀನ್ ಮೊದಲಾದವರು ಮಾತನಾಡಿದರು. ಪೀಪಲ್ಸ್ ಫೌಂಡೇಶನ್ ಜಿಲ್ಲಾ ಸಂಯೋಜಕ ಬಿ.ಕೆ.ಮುಹಮ್ಮದ್ ಕುಂಞÂ್ಞ ಸ್ವಾಗತಿಸಿ, ಇಸ್ಮಾಯಿಲ್ ಮೂಸಾ ವಂದಿಸಿದರು.




.jpg)
