ಕಾಸರಗೋಡು: ನೀಲೇಶ್ವರ ನದಿಗೆ ಅಡ್ಡ ಕಚ್ಚೇರಿಕಡವ್ ರಸ್ತೆಗೆ ನಿರ್ಮಿಸಲಾದ ನಿರ್ಮಿಸಲಾದ ಸೇತುವೆಯನ್ನು ರಾಜ್ಯ ಲೋಕೋಪಯೋಗಿ-ಪ್ರವಾಸೋದ್ಯಮ ಸಚಿವ ಪಿ.ಎ.ಮುಹಮ್ಮದ್ ರಿಯಾಜ್ ಆನ್‍ಲೈನ್ ಮೂಲಕ ಉದ್ಘಾಟಿಸಿದರು. ಕೆಐಎಫ್‍ಬಿ ನೆರವಿನೊಂದಿಗೆ ಸೇತುವೆ ನಿರ್ಮಿಸಲಾಗಿದೆ.
ಕಚ್ಚೇರಿಕಡುವಿನಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷ ಪಿ.ಪಿ.ಮಹಮ್ಮದ್ ರಫಿ, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ರವೀಂದ್ರನ್, ಪುರಸಭಾ ಸದಸ್ಯರಾದ ಪಿ.ಭಾರ್ಗವಿ, ಕೆ.ಪ್ರೀತಾ, ಇ.ಶಜೀರ್, ರಾಜಕೀಯ ಪಕ್ಷದ ಮುಖಂಡರಾದ ಎಂ.ರಾಜನ್, ಮಾಮುನಿ ವಿಜಯನ್, ರಮೇಶ ಮನಿಶೆಕೋಡ್, ವಕೀಲ ಕೆ.ಪಿ.ನಾಸೀರ್, ಕುರಿಯಾಕೋಸ್ ಪ್ಲಾಂಪರಂಬಿಲ್, ಎನ್.ಜೆ.ಜಾಯ್, ಕರೀಂ ಚಂದೇರ, ಕೈಪ್ರತ್ ಕೃಷ್ಣನ್ ನಂಬಿಯಾರ್, ಮಮ್ಮು ಕೊಟ್ಟಾಪುರಂ, ಜೋಮೋನ್ ಮಳಕಲ್, ಸುರೇಶ್ ಪುತಿಯದತ್ ಮತ್ತು ಪಿ.ಯು.ವಿಜಯಕುಮಾರ್ ಉಪಸ್ಥಿತರಿದ್ದರು.
ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ ಸ್ವಾಗತಿಸಿದರು. ಕೆಆರ್‍ಎಫ್‍ಬಿ ಸಹಾಯಕ ಕಾರ್ಯಪಾಲಕ ಅಭಿಯಂತರ ಜಯದೀಪ್‍ಕುಮಾರ್ ವಂದಿಸಿದರು.





