ನವದೆಹಲಿ: ಉದ್ಯಮಿಗಳಾದ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅವರೊಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಅವರಿರುವ ಭಿತ್ತಿಪತ್ರಗಳನ್ನು ಕೇಂದ್ರ ದೆಹಲಿಯ ಹಲವೆಡೆ ಪ್ರದರ್ಶಿಸಲಾಗಿದೆ. ಇದಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.
0
samarasasudhi
ಮಾರ್ಚ್ 07, 2024
ನವದೆಹಲಿ: ಉದ್ಯಮಿಗಳಾದ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅವರೊಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಅವರಿರುವ ಭಿತ್ತಿಪತ್ರಗಳನ್ನು ಕೇಂದ್ರ ದೆಹಲಿಯ ಹಲವೆಡೆ ಪ್ರದರ್ಶಿಸಲಾಗಿದೆ. ಇದಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.
ಈ ಭಿತ್ತಿಪತ್ರಗಳ ಮೇಲೆ 'ಮೋದಿ ಕಾ ಅಸ್ಲಿ ಪರಿವಾರ್' (ಮೋದಿ ಅವರ ಅಸಲಿ ಪರಿವಾರ) ಎಂದು ಬರೆಯಲಾಗಿದೆ. ಅದರ ಅಡಿಯಲ್ಲಿ ಭಾರತೀಯ ಯುವ ಕಾಂಗ್ರೆಸ್ ಎಂದು ಬರೆಯಲಾಗಿದೆ.
ನವದೆಹಲಿಯ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ನೀಡಿದ್ದ ದೂರು ಆಧರಿಸಿ, ದೆಹಲಿ ಸ್ವತ್ತುಗಳ ವಿರೂಪ ತಡೆ ಕಾಯ್ದೆ ಅಡಿ ಅಪರಿಚಿತರ ವಿರುದ್ಧ ತುಘಲಕ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ. ಈ ಭಿತ್ತಿಪತ್ರಗಳನ್ನು ಪ್ರಕಟಿಸಿದ ಮತ್ತು ಅಂಟಿಸಿದವರ ಹೆಸರನ್ನು ಅವುಗಳ ಮೇಲೆ ಲಗತ್ತಿಸಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಮೋದಿ ಅವರಿಗೆ ಕುಟುಂಬವಿಲ್ಲ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಈಚೆಗೆ ವ್ಯಂಗ್ಯವಾಡಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಮೋದಿ ಅವರು 'ದೇಶದ 140 ಕೋಟಿ ಭಾರತೀಯರು ನನ್ನ ಕುಟುಂಬ ಎಂದಿದ್ದರು'. ಆ ಬಳಿಕ, ಸಾಮಾಜಿಕ ಜಾಲತಾಣದಲ್ಲಿ 'ಮೋದಿ ಕಾ ಪರಿವಾರ್' ಎಂಬ ಅಭಿಯಾನವನ್ನು ಬಿಜೆಪಿ ಆರಂಭಿಸಿತು.