HEALTH TIPS

ದಕ್ಷಿಣ ಕೊರಿಯಾ ಜತೆ ಸಂಬಂಧ ವೃದ್ಧಿಗೆ ಭಾರತ ಒಲವು

             ಸೋಲ್‌: ಭಾರತವು ದಕ್ಷಿಣ ಕೊರಿಯಾದ ಜತೆಗೆ ತನ್ನ ಕಾರ್ಯತಂತ್ರದ ಪಾಲುದಾರಿಕೆಯನ್ನು ನಿರ್ಣಾಯಕ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳು, ಸೆಮಿಕಂಡಕ್ಟರ್‌ಗಳು, ಹಸಿರು ಜಲಜನಕದಂತಹ ಕ್ಷೇತ್ರಗಳತ್ತ ವಿಸ್ತರಿಸಲು ಬಯಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಬುಧವಾರ ಹೇಳಿದರು.

            ಈ ಮೂಲಕ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಭಾರತ ಬಯಸುತ್ತದೆ ಎಂದು ಅವರು ಪ್ರತಿಪಾದಿಸಿದರು.

            ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಚೋ ಟೇ-ಯುಲ್‌ ಅವರ ಜತೆಗೆ ಸೋಲ್‌ನಲ್ಲಿ ನಡೆದ ಭಾರತ- ದಕ್ಷಿಣ ಕೊರಿಯಾ ಜಂಟಿ ಆಯೋಗದ 10ನೇ ಸಭೆಯಲ್ಲಿ ‌ಅವರು ಮಾತನಾಡಿದರು.

             ಉಭಯ ದೇಶಗಳ ಪ್ರತಿನಿಧಿಗಳು ರಕ್ಷಣೆ, ವಿಜ್ಞಾನ- ತಂತ್ರಜ್ಞಾನ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿನ ಸಹಕಾರ ವೃದ್ಧಿ ಕುರಿತು ಸಮಗ್ರ ಚರ್ಚೆ ನಡೆಸಿದರು ಎಂದು ಜೈಶಂಕರ್‌ ಅವರು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

               ಅದರ ಜತೆಗೆ ಇಂಡೊ-ಪೆಸಿಫಿಕ್‌ನಲ್ಲಿನ ಬೆಳವಣಿಗೆಗಳು, ಈ ಪ್ರದೇಶದಲ್ಲಿನ ಸವಾಲುಗಳ ಕುರಿತು ಚರ್ಚಿಸಲಾಯಿತು. ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆಯೂ ಈ ವೇಳೆ ಚರ್ಚಿಸಲಾಯಿತು ಎಂದು ಸಚಿವರು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries