ಕಾಸರಗೋಡು: ಸಾಮಾಜಿಕ ನ್ಯಾಯ ಇಲಾಖೆಯಡಿಯಲ್ಲಿ ಕಾಸರಗೋಡು ಪರವನಡ್ಕದಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ವೃದ್ಧ ಮಂದಿರದಲ್ಲಿ ಸೋಶಿಯಲ್ ವರ್ಕರ್‍ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗುವುದು. ಮಾಸಿಕ ವೇತನ ರೂ.25000 ನೀಡಲಾಗುವುದು. ಗುತ್ತಿಗೆ ಅವಧಿ ಒಂದು ವರ್ಷ ಆಗಿದ್ದು, 2024 ಜನವರಿ 1 ಕ್ಕೆ 25 ರಿಂದ 45 ವರ್ಷ ವಯಸ್ಸಿನವರಾಗಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸೋಶಿಯಲ್ ವರ್ಕರ್ ವಿಷಯದಲ್ಲಿ ಪದವಿ ಪಡೆದಿದ್ದು, ಸ್ನಾತಕೋತ್ತರ ಪದವಿ ಹಾಗೂ ಸರ್ಟಿಫೈಡ್ ಕೌನ್ಸೆಲಿಂಗ್ ಕೋರ್ಸ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಸರ್ಕಾರಿ ಯಾ ಸರ್ಕಾರೇತರ ಸಂಸ್ಥೆಗಳಲ್ಲಿ ಸೋಶಿಯಲ್ ವರ್ಕರ್ ಹುದ್ದೆಯಲ್ಲಿ ಎರಡು ವರ್ಷಕ್ಕಿಂತ ಕಡಿಮೆಯಿಲ್ಲದ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಸಾಮಾಜಿಕ ನ್ಯಾಯ ಇಲಾಖೆಯ ಹಿರಿಯರ ವಲಯಕ್ಕೆ ಸಂಬಂಧಿಸಿದ ಯೋಜನೆಗಳಲ್ಲಿ ಕೆಲಸ ಮಾಡಿದ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಹತೆಯನ್ನು ಸಾಬೀತುಪಡಿಸುವ ದಾಖಲೆಗಳೊಂದಿಗೆ ಮಾರ್ಚ್ 11 ರಂದು ಬೆಳಿಗ್ಗೆ 10.30 ಕ್ಕೆ ಕಾಸರಗೋಡು ಸಿವಿಲ್ ಸ್ಟೇಷನ್‍ನಲ್ಲಿರುವ ಜಿಲ್ಲಾ ಸಾಮಾಜಿಕ ನ್ಯಾಯ ಕಛೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.
ನೇಮಕಗೊಂಡವರು, ವಾಸಿಸುವವರ ವೈಯಕ್ತಿಕ ಆರೈಕೆಯ ಯೋಜನೆಗಳನ್ನು ಸಿದ್ಧಪಡಿಸಬೇಕು, ಕೌನ್ಸೆಲಿಂಗ್ ನೀಡಬೇಕು, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜತೆಗೆ ಅನುಷ್ಠಾನಗೊಳಿಸಬೇಕು, ಜಿಲ್ಲಾ ಮಟ್ಟದಲ್ಲಿ ವೃದ್ಧರಿಗೆ ಸಂಬಂಧಿತ ಜವಾಬ್ದಾರಿಗಳನ್ನು ನಿರ್ವಹಿಸಿ, ಅಗತ್ಯವಿರುವಂತೆ ಫೀಲ್ಡ್ ಮಟ್ಟದ ಚಟುವಟಿಕೆಗಳು ಹಾಗೂ ಮನೆಗೆ ಭೇಟಿ ನೀಡಿ ವರದಿ ಸಲ್ಲಿಸಿ, ಮೈಂಟೆನೆನ್ಸ್ ಟೈಬ್ಯೂಲುಗಳು, ಡಿ.ಎಲ್.ಎಸ್.ಎ ಎಂಬಿವುಗಳೊಂದಿಗೆ ಸೇರಿ ಕಾನೂನು ಸೇವೆಗಳನ್ನು ಖಾತ್ರಿಪಡಿಸುವುದು ಮುಂತಾದ ಕರ್ತವ್ಯಗಳನ್ನು ನಿರ್ವಹಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(04994 239726, 87146)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




