ಕಾಸರಗೋಡು: 2024ರ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ, ಕಾಸರಗೋಡು ಲೋಕಸಭಾ ಕ್ಷೇತ್ರದ ಯಾವುದೇ ಅಭ್ಯರ್ಥಿ, ಅವರ ಏಜೆಂಟರು ಅಥವಾ ಅಭ್ಯರ್ಥಿಗಳಿಗಾಗಿ ರಾಜಕೀಯ ಪಕ್ಷಗಳು, ಪೋಸ್ಟರ್, ಬ್ಯಾನರ್ ಅಥವಾ ಇತರ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಲು ತಲಪುವ ಮುದ್ರಣಾಲಯಗಳಿಂದ ಸಾಕ್ಷ್ಯಪತ್ರಗಳನ್ನು(ಪರಿಚಿತರಾದ ಇಬ್ಬರು ವ್ಯಕ್ತಿಗಳಿಂದ ದೃಢೀಕರಿಸಿದ) ತೆಗೆದಿರಿಸಿಕೊಳ್ಳಬೇಕು. ಮುದ್ರಿತ ಪ್ರಚಾರ ಸಾಮಗ್ರಿಗಳಲ್ಲಿ ಮುದ್ರಣಾಲಯದ ಹೆಸರು, ಅದನ್ನು ತಯಾರಿಸುವವರ ಹೆಸರು, ವಿಳಾಸ ಮತ್ತು ಪ್ರತಿಗಳ ಸಂಖ್ಯೆಯನ್ನು ದಾಖಲಿಸಬೇಕು. ಅಲ್ಲದೆ ಇವುಗಳ 4 ಪ್ರತಿಗಳು ಮತ್ತು ಸಾಕ್ಷ್ಯಪತ್ರದ ಪ್ರತಿಯನ್ನು ಮೂರು ದಿನಗಳ ಒಳಗಾಗಿ ಮುದ್ರಣಾಲಯವು ಕಾರ್ಯನಿರ್ವಹಿಸುತ್ತಿರುವ ಪ್ರದೇಶದ ವಿಧಾನಸಭಾ ಕ್ಷೇತ್ರದ ಸಹಾಯಕ ಖರ್ಚುವೆಚ್ಚ ವೀಕ್ಷಕರಿಗೆ ಅಥವಾ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಾಚರಿಸುತ್ತಿರುವ ಚುನಾವಣಾ ವೆಚ್ಚದ ನೋಡಲ್ ಅಧಿಕಾರಿಗಳಿಗೆ ರವಾನಿಸಬೇಕು. ಇದನ್ನು ಪಾಲಿಸದ ಮುದ್ರಣಾಲಯಗಳ ಪರವಾನಗಿ ರದ್ದುಗೊಳಿಸುವ ಹಾಗೂ 1921ರ ಜನ ಪ್ರತಿನಿಧಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ವೆಚ್ಚದ ನೋಡಲ್ ಅಧಿಕಾರಿ ವಿ. ಚಂದ್ರನ್ ಮಾಹಿತಿ ನೀಡಿದ್ದಾರೆ.




.jpeg)
